ಬೆಂಗಳೂರು : ಪಿಂಚಣಿ ಪ್ರಸ್ತಾವನೆಗಳನ್ನು ಮಹಾಲೇಖಪಾಲರ ಕಚೇರಿಗೆ ಸಲ್ಲಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಸರ್ಕಾರದ ಪತ್ರದಲ್ಲಿ ಸ್ವೀಕೃತವಾಗಿರುವ : GM/Genl/2024-25/36, Dated: 16.04.202400 ಶಾಲಾ ಶಿಕ್ಷಣ ಇಲಾಖೆಯ ಗೆಜೆಟೆಡ್ ಅಧಿಕಾರಿಗಳು (ಗ್ರೂಪ್ – ಎ ಮತ್ತು ಬಿ ಅಧಿಕಾರಿಗಳು) ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ್ದರೂ, ಸದರಿ ಅಧಿಕಾರಿಗಳ ಪಿಂಚಣಿ ಪ್ರಸ್ತಾವನೆಗಳು ಮಹಾಲೇಖಪಾಲರ ಕಛೇರಿಗೆ ಸ್ವೀಕೃತವಾಗಿಲ್ಲದ ಕಾರಣ ಈ ಸಂಬಂಧ ನಿಯಮಾನುಸಾರ ಪರಿಶೀಲಿಸಿ 117 ಅಧಿಕಾರಿಗಳ ಬಾಕಿ ಪಿಂಚಣಿ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲು ಕೋರಲಾಗಿರುತ್ತದೆ.
ಸರ್ಕಾರಿ ನೌಕರರು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದುವ ಅಧಿಕಾರಿಗಳ ಮುಂಚಿತ ಮೂರು ತಿಂಗಳಲ್ಲಿ ಪಿಂಚಣಿ ಪ್ರಸ್ತಾವನೆಯನ್ನು ಮಹಾಲೇಖಪಾಲರಿಗೆ ಸಲ್ಲಿಸಬೇಕಾಗಿರುತ್ತದೆ. ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ್ದರೂ ಮಹಾಲೇಖಪಾಲರ ಪತ್ರದಲ್ಲಿ ಲಗತ್ತಿಸಲಾದ ಪಟ್ಟಿಯಲ್ಲಿನ ಅಧಿಕಾರಿಗಳ ಪಿಂಚಣಿ ಪ್ರಸ್ತಾವನೆಗಳು ಮಹಾಲೇಖಪಾಲರ ಕಛೇರಿಗೆ ಸ್ವೀಕೃತವಾಗಿರುವುದಿಲ್ಲವೆಂದು ತಿಳಿಸಿ, ಸಂಬಂಧಪಟ್ಟ ನಿಯಂತ್ರಣಾಧಿಕಾರಿಗಳಿಗೆ ಬಾಕಿ ಪ್ರಕರಣಗಳ ಇತ್ಯರ್ಥ ಕುರಿತು ನಿರ್ದೇಶನ ನೀಡಲು ಸೂಚಿಸಿರುತ್ತಾರೆ.
ಪ್ರಯುಕ್ತ, ಮಹಾಲೇಖಪಾಲರ ಪತ್ರದಲ್ಲಿ ಸೂಚಿಸಲಾದ ಬಾಕಿ ಪ್ರಕರಣಗಳ ಇತ್ಯರ್ಥಪಡಿಸುವ ಕುರಿತಂತೆ ಮಹಾಲೇಖಪಾಲರಿಗೆ ಕೂಡಲೇ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದೆ ಹಾಗೂ ತಮ್ಮ ವ್ಯಾಪ್ತಿಯ ಬಾಕಿ ಪಿಂಚಣಿ ಪ್ರಕರಣಗಳ ಇತ್ಯರ್ಥ ಕುರಿತು ತೆಗೆದುಕೊಂಡ ಕ್ರಮದ ವರದಿಯನ್ನು ತಪ್ಪದೇ ಸಲ್ಲಿಸಲು ಸೂಚಿಸಿದೆ.
ಮುಂದುವರೆದು, ತಮ್ಮ ವ್ಯಾಪ್ತಿಯಲ್ಲಿನ ನಿವೃತ್ತ/ ನಿವೃತ್ತಿ ಹೊಂದಲಿರುವ ಅಧಿಕಾರಿಗಳ ಪಿಂಚಣಿ ಪ್ರಸ್ತಾವನೆಯನ್ನು ನಿಗಧಿತ ಅವಧಿಯೊಳಗೆ ಸಲ್ಲಿಸಲು ನಿಯಮಾನುಸಾರ ಕ್ರಮವಹಿಸುವುದು. ಸಂಬಂಧಪಟ್ಟ ನಿಯಂತ್ರಣಾಧಿಕಾರಿಗಳು ಪಿಂಚಿಣಿ ಪಕರಣಗಳ ಕುರಿತಂತೆ ತ್ರೈಮಾಸಿಕವಾಗಿ ಪರಿಶೀಲಿಸಿ ಕ್ರಮವಹಿಸಲು ಸಹ ಸೂಚಿಸಿದೆ.











