ನವದೆಹಲಿ: ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ದರ 10 ಗ್ರಾಂಗೆ 1 ಲಕ್ಷ ರೂಪಾಯಿಗಳ ಗಡಿಯ ಹತ್ತಿರಕ್ಕೆ ಬಂದಿದೆ.
ಅಖಿಲ ಭಾರತ ಸರಾಫ್ ಅಸೋಸಿಯೇಷನ್ ಪ್ರಕಾರ, ಶೇ. 99.9 ಶುದ್ಧತೆಯ ಹಳದಿ ಲೋಹವು 1,650 ರೂಪಾಯಿಗಳ ಏರಿಕೆಯಾಗಿ 10 ಗ್ರಾಂಗೆ 99,800 ರೂಪಾಯಿಗಳ ಮಟ್ಟವನ್ನು ತಲುಪಿದೆ. ಶುಕ್ರವಾರ ಇದರ ಮೌಲ್ಯವು 20 ರೂಪಾಯಿಗಳ ಇಳಿಕೆಯಾಗಿ 98,150 ರೂಪಾಯಿಗಳಿಗೆ ತಲುಪಿತ್ತು.
ಅದೇ ರೀತಿ, ಶೇ. 99.5 ಶುದ್ಧತೆಯ ಚಿನ್ನವು ಸ್ಥಳೀಯ ಮಾರುಕಟ್ಟೆಗಳಲ್ಲಿ 1,600 ರೂಪಾಯಿಗಳ ಏರಿಕೆಯಾಗಿ 10 ಗ್ರಾಂಗೆ 99,300 ರೂಪಾಯಿಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿತು. ಹಿಂದಿನ ಮಾರುಕಟ್ಟೆ ಮುಕ್ತಾಯದ ಸಮಯದಲ್ಲಿ ಇದು ಸ್ವಲ್ಪ ಕುಸಿದು 10 ಗ್ರಾಂಗೆ 97,700 ರೂಪಾಯಿಗಳಿಗೆ ಸ್ಥಿರವಾಯಿತು.
ಬೆಳ್ಳಿ ಬೆಲೆಯೂ ಏರಿಕೆ
ಬೆಳ್ಳಿ ಬೆಲೆಯೂ ಪ್ರತಿ ಕೆಜಿಗೆ 500 ರೂ.ಗಳಷ್ಟು ಏರಿಕೆಯಾಗಿ 98,500 ರೂ.ಗಳಿಗೆ ತಲುಪಿದೆ. ಶುಕ್ರವಾರ ಬೆಳ್ಳಿ ಕೆಜಿಗೆ 98,000 ರೂ.ಗಳಲ್ಲಿ ಸ್ಥಿರವಾಗಿ ವಹಿವಾಟು ನಡೆಸಿತ್ತು.