ಬೆಂಗಳೂರು: ಅಂತರ್ಜಲ ವೃದ್ಧಿಗೆ ಬಿಬಿಎಂಪಿ ಶಾಲೆಗಳ ಆವರಣದಲ್ಲಿ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗುವುದು ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.
ಬಿಬಿಎಂಪಿಯ ಶಾಲೆಗಳ ಆವರಣದಲ್ಲಿ ಲಭ್ಯವಿರುವ ಜಾಗಕ್ಕೆ ಅನುಗುಣವಾಗಿ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇಷ್ಟೇ ನೀರು ಇಂಗಲಿದೆ ಎಂಬುದನ್ನು ಮಾಪನ ಮಾಡುವ ಸಾಧನಗಳನ್ನು ಅಳವಡಿಸುತ್ತಿಲ್ಲ. ಮಳೆ ನೀರನ್ನು ಇಂಗಿಸಿ, ಅಂತರ್ಜಲ ಮಟ್ಟವನ್ನು ವೃದ್ಧಿಸಲು ಶಾಲೆಗಳ ಆವರಣದಲ್ಲಿ ಸಣ್ಣ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.