ನವದೆಹಲಿ: ಸಿಬ್ಬಂದಿ ನೇಮಕಾತಿ ಆಯೋಗ(ಎಸ್.ಎಸ್.ಸಿ.) ನೇಮಕಾತಿ ಪರೀಕ್ಷೆಗಳಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ಜಾರಿಗೆ ನಿರ್ಧರಿಸಲಾಗಿದೆ. ಮೇ ತಿಂಗಳಿಂದ ನಡೆಯುವ SSC ನೇಮಕಾತಿ ಪರೀಕ್ಷೆಗಳಲ್ಲಿ ಆಧಾರ್ ದೃಢೀಕರಣ ಜಾರಿಗೆ ಬರಲಿದೆ.
ಅಭ್ಯರ್ಥಿಗಳು ಆನ್ಲೈನ್ ರಿಜಿಸ್ಟ್ರೇಷನ್ ಸಂದರ್ಭದಲ್ಲಿ ಅರ್ಜಿ ಭರ್ತಿ ಮಾಡಿ ದೃಢೀಕರಣ ಮಾಡಿಕೊಳ್ಳಬೇಕು. ನಂತರ ಪರೀಕ್ಷಾ ಕೇಂದ್ರಗಳಲ್ಲಿಯೂ ದೃಢೀಕರಣ ಮಾಡಬೇಕು. ಇದು ಸ್ವಯಂಪ್ರೇರಿತವಾಗಿದೆ. ಪರೀಕ್ಷಾ ಪ್ರಕ್ರಿಯೆ ಸರಳಗೊಳಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ಆಧಾರ್ ದೃಢೀಕರಣದಿಂದ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ತಮ್ಮ ಗುರುತನ್ನು ನಕಲಿ ಮಾಡದಂತೆ ಮತ್ತು ಆಯೋಗ ನಡೆಸುವ ನೇಮಕಾತಿ ಪರೀಕ್ಷೆಗಳಲ್ಲಿ ಮೋಸದ ವಿಧಾನ ಬಳಸದಂತೆ ತಡೆಯಲು ಇದರಿಂದ ಅನುಕೂಲವಾಗಲಿದೆ.
ಕೇಂದ್ರ ಸರ್ಕಾರದ ಅತಿ ದೊಡ್ಡ ನೇಮಕಾತಿ ಸಂಸ್ಥೆಗಳಲ್ಲಿ SSC ಒಂದಾಗಿದ್ದು, ವಿವಿಧ ಆಯೋಗ, ಸಚಿವಾಲಯಗಳು, ಇಲಾಖೆಗಳಲ್ಲಿ ನಾನ್ ಗೆಜೆಟೆಡ್ ಹುದ್ದೆಗಳ ನೇಮಕಾತಿಗಳಿಗೆ ಪರೀಕ್ಷೆ ನಡೆಸುತ್ತದೆ.