ಬೀದರ್: ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಭಾನುವಾರ ಹುಲಸೂರು ತಾಲೂಕಿನ ಮುಚಳಂಬ ಗ್ರಾಮದಲ್ಲಿ ನಡೆದಿದೆ.
ಮುಚಳಂಬ ಗ್ರಾಮದ ಅವಿನಾಶ ಶರಣಪ್ಪ ಮಚಕೂರೆ(16), ಭಾಲ್ಕಿ ತಾಲೂಕಿನ ಕೋಟಗೇರಾ ಗ್ರಾಮದ ಬಾಗೇಶ ಕಮಲಾಕರ ಮಾನೆ(16) ಮೃತಪಟ್ಟ ಬಾಲಕರು. ಭಾನುವಾರ ಮಧ್ಯಾಹ್ನ ಐವರು ಸ್ನೇಹಿತರು ಗ್ರಾಮದ ಸಮೀಪದಲ್ಲಿದ್ದ ಬಾವಿಯೊಂದರಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ಈಜು ಬಾರದ ಓರ್ವ ಬಾಲಕ ಬಾವಿಗೆ ಇಳಿದಿದ್ದು, ಆತನನ್ನು ರಕ್ಷಿಸಲು ಹೋದ ಮತ್ತೊಬ್ಬ ಕೂಡ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.