ಬೆಂಗಳೂರು: ಕೋರ್ಟ್ ಹೆಸರಿನಲ್ಲಿ ನಕಲಿ ಆದೇಶ ಸೃಷ್ಟಿಸಿ ಸರ್ಕಾರದ ಹೆಸರಲ್ಲಿ ಇ-ಮೇಲ್ ರಚಿಸಿಕೊಂಡು ಬ್ಯಾಂಕ್ ಗೆ 1.32 ಕೋಟಿ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ.
ಪ್ರಕರಣ ಸಂಬಂಧ ಹೊರರಾಜ್ಯದ ಮೂವರು ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ದೆಹಲಿಯ ಅಭಿಮನ್ಯು ಕುಮಾರ್ ಪಾಂಡ್ಯ, ನೀರಜ್ ಸಿಂಗ್, ರಾಜಸ್ಥಾನ ಮೂಲದ ಸಾಗರ್ ಲುಕ್ರಾ ಎಂದು ಗುರುತಿಸಲಾಗಿದೆ.
ಐಸಿಐಸಿಐ ಬ್ಯಾಂಕ್ ನ ಹಲಸೂರು ಶಾಖೆಯ ವ್ಯವಸ್ಥಪಕರು ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಮೂವರು ಆರೋಪಿಗಳು cb-crime-sog@karnataka.gov.in ಎಂಬ ನಕಲಿ ಐಡಿ ರೂಪಿಸಿಕೊಂಡು ಅದರಿಂದ ಬ್ಯಾಂಕ್ ನ ಇ-ಮೇಲ್ ಗೆ ಸಂದೇಶ ಕಳುಹಿಸಿ ಹಣ ವರ್ಗಾವಣೆ ಮಾಡಿಕೊಂಡು ವಂಚನೆ ನಡೆಸಿದ್ದರು.