ಬೆಂಗಳೂರು : ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಿಗೆ 2024-25ನೇ ಸಾಲಿನಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ “ಸರ್ವೋತ್ತಮ ಸೇವಾ ಪ್ರಶಸ್ತಿ” ಪಡೆಯಲು ತಮ್ಮ ನಾಮ ನಿರ್ದೇಶನ ಸಲ್ಲಿಸಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
“ಸರ್ವೋತ್ತಮ ಸೇವಾ ಪ್ರಶಸ್ತಿ”ಯ ಎರಡು ಹಂತದ ಪ್ರಶಸ್ತಿಗಳಿಗೂ ಅರ್ಜಿ ಸಲ್ಲಿಸಬಯಸುವವರು, ಪ್ರತಿ ಹಂತಕ್ಕೂ ಪ್ರತ್ಯೇಕವಾಗಿ ತಮ್ಮ ನಾಮ ನಿರ್ದೇಶನವನ್ನು ಸಲ್ಲಿಸಬೇಕು.
ನಾಮ ನಿರ್ದೇಶನವನ್ನು ಸಲ್ಲಿಸಬಯಸುವವರು ಜಾಲತಾಣ https://dparar.karnataka.gov.in/ ಅಥವಾ https://sarvothamaawards.karnataka.gov.in/ ನಲ್ಲಿ ಏ.28 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಆದೇಶದ ಪ್ರತಿಗಳನ್ನು ಜಾಲತಾಣ https://dparar.karnataka.gov.in/ ರ ಸರ್ಕಾರದ ಆದೇಶಗಳು, ತರಬೇತಿ ಹಾಗೂ ಇತರೆ ವಿವರಗಳನ್ನು ಇಲ್ಲಿ ಅವಲೋಕಿಸಬಹುದಾಗಿದೆ.
ಪ್ರಶಸ್ತಿ ವಿವರ:
ಜಿಲ್ಲಾ ಮಟ್ಟದ (31 ಜಿಲ್ಲೆ*10 ಪ್ರಶಸ್ತಿ) ಸೇರಿದಂತೆ 310 ಪ್ರಶಸ್ತಿಗಳು, ರಾಜ್ಯ ಮಟ್ಟದ 30 ಪ್ರಶಸ್ತಿಗಳನ್ನು ವಿತರಿಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080-22230060ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.