ಅಯ್ಯೋ ದೇವರೇ…! ತಂದೆಯ ಶವಪೆಟ್ಟಿಗೆಯೊಂದಿಗೆ ಇಡೀ ಕುಟುಂಬ ಗೋರಿಗೆ ಉರುಳಿದ ಆಘಾತಕಾರಿ ವಿಡಿಯೊ | Watch

ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆದ ಅಂತ್ಯಕ್ರಿಯೆಯೊಂದು ಭಯಾನಕ ತಿರುವು ಪಡೆದುಕೊಂಡಿದೆ. ತಂದೆಯ ಶವಪೆಟ್ಟಿಗೆಯನ್ನು ಹೊತ್ತೊಯ್ಯುತ್ತಿದ್ದವರು ಇದ್ದಕ್ಕಿದ್ದಂತೆ ಗೋರಿಗೆ ಬಿದ್ದಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಬೆಂಜಮಿನ್ ಅವಿಲೆಸ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಮಾರ್ಚ್ 21 ರಂದು ನಿಧನರಾದರು. ಅವರ ಅಂತ್ಯಕ್ರಿಯೆಯು ಶುಕ್ರವಾರ ಗ್ರೀನ್‌ಮೌಂಟ್ ಸ್ಮಶಾನದಲ್ಲಿ ನಡೆಯುತ್ತಿತ್ತು. ಈ ವೇಳೆ ಶೋಕತಪ್ತರು ನಿಂತಿದ್ದ ಗೋರಿಯ ವೇದಿಕೆ ಕುಸಿದುಬಿದ್ದಿದೆ. ಇದರಿಂದ ಶವಪೆಟ್ಟಿಗೆ ಹೊತ್ತೊಯ್ಯುತ್ತಿದ್ದವರು ಮತ್ತು ಕುಟುಂಬಸ್ಥರು ಗೋರಿಗೆ ಬಿದ್ದಿದ್ದಾರೆ. ಈ ದಾರುಣ ಘಟನೆಯನ್ನು ಅವಿಲೆಸ್ ಅವರ ಕುಟುಂಬದ ಸದಸ್ಯರೇ ವಿಡಿಯೊದಲ್ಲಿ ಸೆರೆಹಿಡಿದಿದ್ದಾರೆ.

ಈ ದುರ್ಘಟನೆಯಲ್ಲಿ ಶವಪೆಟ್ಟಿಗೆ ಹೊತ್ತೊಯ್ಯುತ್ತಿದ್ದವರು ಕಾಲು, ಕೈ ಮತ್ತು ಬೆನ್ನಿಗೆ ಗಾಯಗಳನ್ನು ಮಾಡಿಕೊಂಡಿದ್ದಾರೆ. ಆದರೆ, ಅವಿಲೆಸ್ ಅವರ ಪುತ್ರ ಬೆಂಜಮಿನ್ ಶವಪೆಟ್ಟಿಗೆಯ ಕೆಳಗೆ ಸಿಲುಕಿಕೊಂಡಿದ್ದರಿಂದ ಪರಿಸ್ಥಿತಿ ಗಂಭೀರವಾಗಿತ್ತು. “ಶವಪೆಟ್ಟಿಗೆ ಅವನ ಮೇಲೆ ಬಿದ್ದಿತ್ತು, ಮತ್ತು ಅವನ ಮುಖ ಕೆಸರಿನಲ್ಲಿ ಮುಚ್ಚಿಹೋಗಿತ್ತು” ಎಂದು ಅವಿಲೆಸ್ ಅವರ ಮಲಮಗಳು ಮಾರಿಬೆಲ್ಲೆ ರಾಡ್ರಿಗಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕುಸಿದುಬಿದ್ದ ವೇದಿಕೆಯ ದುಸ್ಥಿತಿಗೆ ಕುಟುಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಮಶಾನ ಮತ್ತು ಅಂತ್ಯಕ್ರಿಯೆ ಗೃಹದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ದೂರಿದ್ದಾರೆ. ಅಲ್ಲದೆ, ಸಮಾರಂಭಕ್ಕೆ ಅಡ್ಡಿಯಾಗಿದ್ದರಿಂದ ಮತ್ತು ಏನೂ ಸರಿಯಾಗಿ ನಡೆಯದ ಕಾರಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮೃತ ಬೆಂಜಮಿನ್ ಅವರು ನಿಷ್ಠಾವಂತ ಪತಿ, ಪ್ರೀತಿಯ ತಂದೆ ಮತ್ತು ಅಜ್ಜ ಎಂದು ಕುಟುಂಬಸ್ಥರು ಸ್ಮರಿಸಿದ್ದಾರೆ. ಅವರ ಅಗಲಿಕೆ ನೋವು ತಂದರೂ, ಅವರ ನೆನಪುಗಳು ಸದಾ ಜೀವಂತವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read