HomeKarnatakaBIG NEWS: ಬಿರುಗಾಳಿ ಮಳೆ: ಸಿಡಿಲು ಬಡಿದು ಯುವಕ ಸಾವು

BIG NEWS: ಬಿರುಗಾಳಿ ಮಳೆ: ಸಿಡಿಲು ಬಡಿದು ಯುವಕ ಸಾವು

ವಿಜಯನಗರ: ಬಿರುಗಾಳಿ, ಮಳೆ ಆರಭಟದ ನಡುವೆ ಸಿಡಿಲು ಬಡಿದು ಯುವಕ ಸಾವನ್ನಪ್ಪಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬಂಡೆಬಸಾಪುರದಲ್ಲಿ ನಡೆದಿದೆ.

ಪಾಂಡುನಾಯ್ಕ್ (18) ಮೃತ ಯುವಕ. ನಿನ್ನೆ ಸಂಜೆ ಭಾರಿ ಮಳೆ ವೇಳೆ ಯುವಕ ಮನೆ ಬಳಿ ನಿಂತಿದ್ದ. ಈ ವೇಳೆ ಏಕಾಏಕಿ ಸಿಡಿಲು ಅಪ್ಪಳಿಸಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸೊಡಿಲ ಹೊಡೆತಕ್ಕೆ ಮನೆ ಗೋಡೆ ಹಾನಿಯಾಗಿದೆ. ಕೂಡ್ಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular