ಹಾಸನ: ನಿಮಗೆ ತರಬೇತಿಯಲ್ಲಿ 54,000 ರೂ. ಸಂಬಳ ನೀಡಲಾಗುತ್ತಿದೆ. ಕೆಲಸ ಮಾಡದೆ ತರಬೇತಿಯಲ್ಲಿ ಅಷ್ಟು ಸಂಬಳ ಪಡೆಯುತ್ತಿದ್ದೀರಿ. ಆದರೆ, ಡ್ರಿಲ್ ಮಾಡಲು ಕೂಡ ಬರುವುದಿಲ್ಲ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಸನ ತಾಲೂಕಿನ ಶಾಂತಿ ಗ್ರಾಮದ ಪೊಲೀಸ್ ತರಬೇತಿ ಶಾಲೆಯಲ್ಲಿ ಬುಧವಾರ ಅವರು ಕಾನ್ಸ್ಟೇಬಲ್ ನೇಮಕಾತಿ ಹೊಂದಿ ತರಬೇತಿಗೆ ಹಾಜರಾದ ಸಿಬ್ಬಂದಿ ಪರೀಕ್ಷಿಸಿದ ವೇಳೆ ಘಟನೆ ನಡೆದಿದೆ.
ಮೂರು ತಿಂಗಳು ತರಬೇತಿಯಾಗಿದ್ದರೂ ಅಟೆನ್ಷನ್ ಕೂಡ ಮಾಡಲು ಬರುತ್ತಿಲ್ಲ. ಏನ್ರೀ ಕಲ್ತಿದ್ದೀರಾ? ನಿಮ್ಮ ಮೇಲೆ ಕ್ರಮ ಆಗಬೇಕು. ಅಧಿಕಾರಿಗಳು ಕೂಡ ತರಬೇತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖುದ್ದು ಡ್ರಿಲ್ ಕಾಷನ್ ಕೊಡಿಸಿ ಅಟೆನ್ಷನ್ ಮಾಡಿ ತೋರಿಸಿದ ಅಲೋಕ್ ಕುಮಾರ್, ಸರಿಯಾಗಿ ತರಬೇತಿ ಪಡೆಯದಿದ್ದರೆ, ಔಟ್ ಪಾಸ್ ಕೊಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೇರೆ ರಾಜ್ಯಗಳಲ್ಲಿ ತರಬೇತಿ ವೇಳೆ ಭತ್ಯೆ ಮಾತ್ರ ನೀಡುತ್ತಾರೆ. ಆದರೆ ಕರ್ನಾಟಕ ಸರ್ಕಾರ ತರಬೇತಿ ಅವಧಿಯಲ್ಲಿಯೂ ಪೊಲೀಸರನ್ನು ಒಳ್ಳೆಯ ರೀತಿ ನೋಡಿಕೊಳ್ಳುತ್ತಿದೆ. ಸರಿಯಾಗಿ ತರಬೇತಿ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ.