ನ್ಯೂಯಾರ್ಕ್: ಯುನೈಟೆಡ್ ಸ್ಟೇಟ್ಸ್‌ನ ನ್ಯೂಯಾರ್ಕ್‌ನ ಹಡ್ಸನ್ ನದಿಗೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಮೂವರು ಮಕ್ಕಳು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಸ್ಪೇನ್‌ನಿಂದ ಭೇಟಿ ನೀಡುತ್ತಿದ್ದ ಪೈಲಟ್ ಮತ್ತು ಕುಟುಂಬದವರು ಸೇರಿದ್ದಾರೆ. ಗುರುವಾರ ಮಧ್ಯಾಹ್ನ ಸುಮಾರು 3:17 ಕ್ಕೆ(ಸ್ಥಳೀಯ ಸಮಯ) ಪಿಯರ್ 40 ಬಳಿ ಅಪಘಾತ ಸಂಭವಿಸಿದೆ. ಬೆಲ್ 206L-4 ಲಾಂಗ್‌ರೇಂಜರ್ IV ಹೆಲಿಕಾಪ್ಟರ್ ಕೆಳ ಮ್ಯಾನ್‌ಹ್ಯಾಟನ್‌ನಿಂದ ಹೊರಟಿತ್ತು.
ಜನಪ್ರಿಯ ದೃಶ್ಯವೀಕ್ಷಣೆಯ ಮಾರ್ಗವನ್ನು ಅನುಸರಿಸಿ ಐಕಾನಿಕ್ ಸ್ಟ್ಯಾಚ್ಯೂ ಆಫ್ ಲಿಬರ್ಟಿಯನ್ನು ಸುತ್ತುವರೆದು ನಂತರ ಹಡ್ಸನ್ ನದಿಯ ಉದ್ದಕ್ಕೂ ಉತ್ತರಕ್ಕೆ ಜಾರ್ಜ್ ವಾಷಿಂಗ್ಟನ್ ಸೇತುವೆಯ ಕಡೆಗೆ ಹಾರಿತು. ದಕ್ಷಿಣಕ್ಕೆ ಹಿಂತಿರುಗಿದ ಸ್ವಲ್ಪ ಸಮಯದ ನಂತರ ಹೆಲಿಕಾಪ್ಟರ್ ನ್ಯೂಜೆರ್ಸಿ ತೀರದ ಬಳಿ ನದಿಗೆ ಬಿದ್ದಿದೆ.
ಮೃತರಲ್ಲಿ ಪ್ರಮುಖ ಸ್ಪ್ಯಾನಿಷ್ ವ್ಯಾಪಾರ ಕಾರ್ಯನಿರ್ವಾಹಕ, ಸ್ಪೇನ್‌ನ ಸೀಮೆನ್ಸ್‌ನ ಅಧ್ಯಕ್ಷ ಮತ್ತು ಸಿಇಒ ಆಗಸ್ಟಿನ್ ಎಸ್ಕೋಬಾರ್ ಸೇರಿದ್ದಾರೆ. ಎಸ್ಕೋಬಾರ್ ಅವರ ಪತ್ನಿ ಮತ್ತು ಅವರ ಮೂವರು ಮಕ್ಕಳೊಂದಿಗೆ ದುರಂತಕ್ಕೀಡಾದ ಹೆಲಿಕಾಪ್ಟರ್ ನಲ್ಲಿದ್ದರು.
ಟ್ರಂಪ್ ಸಂತಾಪ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ. “ಹಡ್ಸನ್ ನದಿಯಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತ. ಪೈಲಟ್, ಇಬ್ಬರು ವಯಸ್ಕರು ಮತ್ತು ಮೂವರು ಮಕ್ಕಳು ಸೇರಿದಂತೆ ಆರು ಜನರು ಈಗ ನಮ್ಮೊಂದಿಗೆ ಇಲ್ಲ ಎಂದು ತೋರುತ್ತದೆ. ಅಪಘಾತದ ದೃಶ್ಯಗಳು ಭಯಾನಕವಾಗಿವೆ. ಬಲಿಪಶುಗಳ ಕುಟುಂಬಗಳು ಮತ್ತು ಸ್ನೇಹಿತರನ್ನು ದೇವರು ಆಶೀರ್ವದಿಸಲಿ ಎಂದಿದ್ದಾರೆ.
Hudson River helicopter crash, as an engineer the amount of single points of failure in a helicopter scares the shit out of me.pic.twitter.com/fHyGJ0ZaZb
— ✪ Evil Te𝕏an ✪ (@vileTexan) April 10, 2025