ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ವಿಶೇಷ ಆಫರ್ ಘೋಷಿಸಿದೆ. ವಾಹನ ಪಾರ್ಕಿಂಗ್ ಮಾಡಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರಿಗೆ ಡಿಸ್ಕೌಂಟ್ ನೀಡುವುದಾಗಿ ಘೋಷಿಸಿದೆ.
ಮೆಟ್ರೋದಲ್ಲಿ ಪ್ರಯಣಿಸುವ ಹಲವು ಪ್ರಯಣಿಕರು ತಮ್ಮ ವಾಹನವನ್ನು ಮೆಟ್ರೋ ಸ್ಟೇಷನ್ ಬಳಿ ಅಡ್ಡಾದಿಡ್ದಿಯಾಗಿ ವಾಹನ ನಿಲ್ಲಿಸಿ ಮೆಟ್ರೋ ಹತ್ತುತ್ತಾರೆ. ಇದರಿಂದ ಸಾಕಷ್ಟು ಸಮಸ್ಯೆಗಳು ಉದ್ಭವಿಸುತ್ತಿವೆ. ಪಾರ್ಕಿಂಗ್ ನಲ್ಲಿ ಸರಿಯಾಗಿ ವಾಹನ ನಿಲುಗಡೆ ಮಡದ ಕಾರಣ ರಸ್ತೆವರೆಗೂ ವಾಹನ ನಿಲ್ಲಿಕ್ಸುವ ಸ್ಥಿತಿ ಈ ನಿಟ್ಟಿನಲ್ಲಿ ಮೆಟ್ರೋ ನಿಲ್ದಾಣಗಳ ವಾಹನ ನಿಲುಗಡೆಗೆ ಹೊಸ ರೂಪ ಕೊಡಲು ಬಿಎಂ ಆರ್ ಸಿ ಎಲ್ ನಿರ್ಧರಿಸಿದೆ.
ಮಾಲ್ ಗಳಲ್ಲಿ ಇರುವಂತಹ ಲೆವಲ್ ಪಾರಿಂಗ್ ಮಾದರಿ ಅನುಸರಿಸಲ್ಲು ಮುಂದಾಗಿದೆ. ಅದರಂತೆ ಪಾರ್ಕಿಂಗ್ ಸ್ಥಳಗಳಲ್ಲಿ ಮಷಿನ್ ಅಳವಡಿಸಿ, ಮಲ್ಟಿ ಲೆವಲ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಿದೆ. ಇದರ ಜೊತೆಗೆ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ವಾಹನಗಳನ್ನು ಮೆಟ್ರೋ ಸ್ಟೇಷನ್ ನಲ್ಲಿ ಪಾರ್ಕ್ ಮಾಡುವುದಾದರೆ ಅಂತವರಿಗೆ ಡಿಸ್ಕೌಂಟ್ ನೀಡಲು ಚಿಂತನೆ ನಡೆಸಲಾಗಿದೆ ಎಂದು ಬಿಎಂಆರ್ ಸಿಎಲ್ ಎಂಡಿ ಡಾ.ಮಹೇಶ್ವರ ರಾವ್ ತಿಳಿಸಿದ್ದಾರೆ.