HomeKarnatakaBIG NEWS: ಭೀಕರ ಸರಣಿ ಅಪಘಾತ: ಬಿಎಸ್ ಎಫ್ ಯೋಧ ದುರ್ಮರಣ

BIG NEWS: ಭೀಕರ ಸರಣಿ ಅಪಘಾತ: ಬಿಎಸ್ ಎಫ್ ಯೋಧ ದುರ್ಮರಣ

ವಿಜಯಪುರ: ಲಾರಿ, ಬೈಕ್ ಹಾಗೂ ಆಂಬುಲೆನ್ಸ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಬಿಎಸ್ ಎಫ್ ಯೋಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ.

ಮೌನೇಶ್ ರಾಥೋಡ್ (೩೫) ಮೃತ ಯೋಧ. ಮುದ್ದೆ ಬಿಹಾಳದ ಕಾಳಗಿ ಮೂಲದವರು. ಲಾರಿ ಬೈಕ್ ಗೆ ಡಿಕ್ಕಿಯಾಗಿದ್ದು, ಬಳಿಕ ಎದುರಿನಿಂದ ಬರುತ್ತಿದ್ದ ಆಂಬುಲೆನ್ಸ್ ಗೆ ಗುದ್ದಿದೆ. ಅಪಘಾತದಲ್ಲಿ ಬೈಕ್ ನಲ್ಲಿದ್ದ ಯೋಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಆಂಬುಲೆನ್ಸ್ ಚಾಲಕ ಕೇರಳ ಮೂಲದ ರಿತೇಶ್ ಸ್ಥಿತಿ ಗಂಭೀರವಾಗಿದೆ. ಗಾಯಾಳುವನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular