ಬೆಂಗಳೂರು : ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಕಾವೇರಿ ನೀರಿನ ದರ ಏರಿಕೆ ಮಾಡಲಾಗಿದೆ. ಹಾಲು, ಪೆಟ್ರೋಲ್, ಗ್ಯಾಸ್ ಬೆಲೆ ಹೆಚ್ಚಳದ ಬಳಿಕ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಕಾವೇರಿ ನೀರಿನ ದರ ಪ್ರತಿ ಲೀಟರ್ಗೆ 1 ಪೈಸೆ ಹೆಚ್ಚಳ ಮಾಡಲಾಗಿದ್ದು, ಸಾವಿರ ಲೀಟರ್ಗೆ ರೂ. 17 ಪಾವತಿಸಬೇಕಾಗಿದೆ. ಮಾಸಿಕ ಪಾವತಿ ದರವು 56 ರಿಂದ 136ಕ್ಕೆ ಹೆಚ್ಚಾಗಲಿದೆ. 8 ಸಾವಿರ ಲೀ. ಒಳಗಿನ ನೀರು ಸಂಪರ್ಕಕ್ಕೆ 0.15 ಪೈಸೆ ಹೆಚ್ಚಳ ಮಾಡಲು ಜಲಮಂಡಳಿ ನಿರ್ಧರಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.
ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ದರ ಪ್ರತಿ ಲೀಟರ್ ನೀರಿಗೆ 1 ಪೈಸೆಯಷ್ಟು ಬೆಲೆ ಹೆಚ್ಚಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ತಿಳಿಸಿದ್ದರು.
You Might Also Like
TAGGED:ಕಾವೇರಿ ನೀರಿನ ದರ ಏರಿಕೆ