ಗದಗ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ ನಡೆದ ಪೈಶಾಚಿಕ ಕೃತ್ಯ ಗದಗದಲ್ಲಿ ನಡೆದಿದೆ.
16 ವರ್ಷದ ಬಾಲಕಿ ಮೇಲೆ 55 ವರ್ಷದ ತಂದೆ ಕಳೆದ 1 ವರ್ಷದಿಂದ ಅತ್ಯಾಚಾರ ಎಸಗಿದ್ದಾನೆ.ಆರೋಪಿ ರಮೇಶ್ ಎಂಬಾತ ಇಂತಹ ನೀಚ ಕೃತ್ಯ ಎಸಗಿದ್ದು, ಈತನ ಮೇಲೆ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ, ಅಪ್ರಾಪ್ತ ಬಾಲಕಿ ಗರ್ಭಿಣಿ ಆಗಿದ್ದು, ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ, ಆರೋಪಿ ತಂದೆ ರಮೇಶ್ ನ್ನು ವಶಕ್ಕೆ ಪಡೆದ ಪೊಲೀಸರುವಿಚಾರಣೆ ನಡೆಸುತ್ತಿದ್ದಾರೆ. ಮುಳಗುಂದ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
You Might Also Like
TAGGED:ಪೈಶಾಚಿಕ ಕೃತ್ಯ