ಬೆಂಗಳೂರು: ಡಾ. ಹೆಚ್. ನರಸಿಂಹಯ್ಯ ವಿಜ್ಞಾನ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ – 2025 ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಿದ್ದಾರೆ.
ಪ್ರಾಧಿಕಾರದ ಧ್ಯೇಯೋದ್ದೇಶಗಳು
ಮಾನವ ಕಲ್ಯಾಣಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವುದು.
ಸಂಸ್ಕೃತಿ ಪರಂಪರೆಯನ್ನು ರಕ್ಷಿಸುವುದು.
ವಿಜ್ಞಾನ ಅದರ ಇತಿಹಾಸ ಮತ್ತು ತತ್ವಶಾಸ್ತ್ರದ ಬಗ್ಗೆ ಪರಂಪರೆ ಮತ್ತು ಸಂಸ್ಕೃತಿಯೊಂದಿಗೆ ಒಂದು ಸಕಾರಾತ್ಮಕ ಅನುಭವವನ್ನು ಸೃಷ್ಟಿಸಿ ವಿಜ್ಞಾನವನ್ನು ಹರ್ಷದಾಯಕವಾಗಿ ಕಲಿಯುವುದು.
ಸಮಾಜ ಅಧ್ಯಯನಗಳು, ಕಲೆ ಮತ್ತು ಸಂಸ್ಕೃತಿ ಒಳಗೊಂಡಂತೆ ಇತರೆ ಶೈಕ್ಷಣಿಕ ನವೀನಾತ್ಮಕ ಚಟುವಟಿಕೆಗಳಿಗಾಗಿ ವೇದಿಕೆಯನ್ನು ಕಲ್ಪಿಸುವುದು. ಡಾ.ಹೆಚ್. ನರಸಿಂಹಯ್ಯ ವಿಜ್ಞಾನ, ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಪ್ರಾಧಿಕಾರ ರಚಿಸುವ ಸಂಬಂಧ ಕಾಯ್ದೆ ರೂಪುಗೊಂಡಿದೆ. ಹೊಸೂರು, ವಿದುರಾಶ್ವತ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಸುತ್ತಮುತ್ತಲಿನ ಸ್ಮಾರಕ, ತಾಣಗಳ ಅಭಿವೃದ್ಧಿ ಮತ್ತು ನಿರ್ವಹಣೆ ಈ ಪ್ರಾಧಿಕಾರದ ಉದ್ದೇಶವಾಗಿದೆ.