ಮನೋಜ್ ಕುಮಾರ್ ಪ್ರಾರ್ಥನಾ ಸಭೆಯಲ್ಲಿ ಜಯಾ ಬಚ್ಚನ್ ಆಕ್ರೋಶ : ಮಹಿಳೆಯನ್ನು ತಳ್ಳಿ ಗದರಿಸಿದ ವಿಡಿಯೋ ವೈರಲ್ | Watch

ಹಿರಿಯ ನಟಿ ಮತ್ತು ಸಂಸದರಾದ ಜಯಾ ಬಚ್ಚನ್, ಭಾನುವಾರ ನಟ ಮನೋಜ್ ಕುಮಾರ್ ಅವರ ಪ್ರಾರ್ಥನಾ ಸಭೆಯಲ್ಲಿ ಮಹಿಳೆಯೊಬ್ಬರು ಕೈ ಕುಲುಕಲು ಪ್ರಯತ್ನಿಸಿದಾಗ ಆಕೆಯ ಮೇಲೆ ಕೋಪಗೊಂಡಿದ್ದಾರೆ. ಈ ಘಟನೆಯ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಹಿರಿಯ ನಟಿ, ಮಹಿಳೆಯನ್ನು ಸಮಾಧಾನಪಡಿಸುವ ಮನಸ್ಥಿತಿಯಲ್ಲಿಲ್ಲ ಎಂದು ಕಾಣಿಸುತ್ತದೆ.

ವಿಡಿಯೋದಲ್ಲಿ, ಜಯಾ ಪ್ರಾರ್ಥನಾ ಸಭೆಯ ಸ್ಥಳದಲ್ಲಿ ಬಾಗಿಲ ಬಳಿ ಕಾಯುತ್ತಿರುವುದನ್ನು ಕಾಣಬಹುದು. ಆಗ ಮಹಿಳೆಯೊಬ್ಬರು ಹಿಂಬದಿಯಿಂದ ಬಂದು ಕೈ ಕುಲುಕಬಹುದೇ ಎಂದು ಕೇಳಿದ್ದಾರೆ. ಆಕೆಯ ಪತಿ ಅದನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದರು. ಆದರೆ, ಜಯಾ ಕ್ಯಾಮೆರಾ ನೋಡಿದಾಗ ಕೋಪಗೊಂಡಿದ್ದು, ಮಹಿಳೆಯ ಕೈಯನ್ನು ತಳ್ಳಿ ದಂಪತಿಗಳನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಮಹಿಳೆ ಕ್ಷಮೆಯಾಚಿಸಿ ಪತಿಯೊಂದಿಗೆ ಹೊರಟು ಹೋದರು. ಆದರೂ, ಘಟನೆಯಿಂದ ಜಯಾ ಕೋಪಗೊಂಡಿದ್ದರು.

ಈ ಹಿಂದೆಯೂ ಜಯಾ ಮಾಧ್ಯಮ ಮತ್ತು ಪಾಪರಾಜಿಗಳು ತಮ್ಮ ಫೋಟೋ ಕ್ಲಿಕ್ಕಿಸಿದಾಗ ಕೋಪಗೊಂಡಿದ್ದರು. ಸಂದರ್ಶನವೊಂದರಲ್ಲಿ, ಅವರು ಪಾಪರಾಜಿ ಸಂಸ್ಕೃತಿಯನ್ನು ದ್ವೇಷಿಸುತ್ತೇನೆ ಮತ್ತು ಕಾರ್ಯಕ್ರಮದ ಅವಶ್ಯಕತೆ ಇದ್ದಾಗ ಮಾತ್ರ ಫೋಟೋ ಕ್ಲಿಕ್ಕಿಸಿಕೊಳ್ಳಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read