ಬೆಂಗಳೂರು : ಐಪಿಎಲ್ ಬೆಟ್ಟಿಂಗ್ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನುಗೌಡ ಸೇರಿ 100 ಕ್ಕೂ ರೀಲ್ಸ್ ಸ್ಟಾರ್ ಗಳ ವಿಚಾರಣೆ ಆಗಿದೆ. ಮಾನ್ಯತೆ ಪಡೆಯದ ಬೆಟ್ಟಿಂಗ್ ಆ್ಯಪ್ ಗಳನ್ನು ಪ್ರಮೋಟ್ ಮಾಡಿದ ಆರೋಪದ ಮೇಲೆ ರೀಲ್ಸ್ ಸ್ಟಾರ್ ಸೋನುಗೌಡ ಸೇರಿ 100 ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಲಾಗಿದೆ.
100 ಕ್ಕೂ ಅಧಿಕ ರೀಲ್ಸ್ ಸ್ಟಾರ್ ಗಳಿಗೆ ನೋಟಿಸ್ ನೀಡಿದ ಸೈಬರ್ ಕ್ರೈಂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಐಪಿಎಲ್ ಬೆಟ್ಟಿಂಗ್ ಜಾಹೀರಾತು ಬಿತ್ತರಿಸಲಾಗಿತ್ತು. ಈ ಸಂಬಂಧ ವಕೀಲರೊಬ್ಬರು ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ರೀಲ್ಸ್ ಸ್ಟಾರ್ ಗಳ ಪಟ್ಟಿ ಮಾಡಿ ನೋಟಿಸ್ ನೀಡಿದ್ದರು.
ಸೋನು ಶ್ರೀನಿವಾಸ್ ಗೌಡ, ದೀಪಕ್ ಗೌಡ, ವರುಣ್ ಆರಾಧ್ಯ ಸೇರಿ 100 ಮಂದಿಗೆ ನೋಟಿಸ್ ನೀಡಲಾಗಿದೆ. ಇನ್ಮುಂದೆ ಇಂತಹ ಜಾಹೀರಾತು ಪ್ರಕಟಿಸಿದರೆ ಜೈಲಿಗೆ ಕಳುಹಿಸುತ್ತೇವೆ ಎಂದು ಪೊಲೀಸರು ವಾರ್ನಿಂಗ್ ನೀಡಿ ಕಳುಹಿಸಿದ್ದಾರೆ ಎಂಬುದು ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ.
You Might Also Like
TAGGED:IPL ಬೆಟ್ಟಿಂಗ್ ಜಾಹೀರಾತು'