ಅದ್ದೂರಿ ಮದುವೆ : ವರನಿಗೆ ಹೆಲಿಕಾಪ್ಟರ್ ಗಿಫ್ಟ್, 30 ಸಾವಿರ ಅತಿಥಿಗಳು !

ದೆಹಲಿಯು ಹಿಂದೆಂದೂ ಕಂಡರಿಯದಂತಹ ಅದ್ದೂರಿ ಮದುವೆಯೊಂದಕ್ಕೆ ಸಾಕ್ಷಿಯಾಗಿತ್ತು. ಕಾಂಗ್ರೆಸ್ ನಾಯಕ ಕನ್ವರ್ ಸಿಂಗ್ ತನ್ವರ್ ಅವರ ಪುತ್ರ ಲಲಿತ್, ಮಾಜಿ ಶಾಸಕ ಸುಖ್ಬೀರ್ ಸಿಂಗ್ ಜೌನಾಪುರಿಯಾ ಅವರ ಪುತ್ರಿ ಯೋಗಿತಾ ಅವರನ್ನು 2011 ರಲ್ಲಿ ವಿವಾಹವಾಗಿದ್ದು, ಈ ಮದುವೆಯು ಅಕ್ಷರಶಃ ವೈಭವದ ಗಣಿಯಾಗಿತ್ತು.

ಅಚ್ಚರಿಯೆಂದರೆ, ವಧುವಿನ ಕಡೆಯವರು ವರನಿಗೆ 33 ಕೋಟಿ ರೂಪಾಯಿ ಮೌಲ್ಯದ ಬೆಲ್ 429 ಹೆಲಿಕಾಪ್ಟರ್ ಅನ್ನು ಉಡುಗೊರೆಯಾಗಿ ನೀಡಿದ್ದರು ! ಇಷ್ಟೇ ಅಲ್ಲ, ಮದುವೆಗೆ ಆಗಮಿಸಿದ್ದ ಸುಮಾರು 30 ಸಾವಿರ ಅತಿಥಿಗಳಿಗೆಲ್ಲಾ ದುಬಾರಿ ಉಡುಗೊರೆಗಳನ್ನು ನೀಡಲಾಗಿತ್ತು. ಲಗನ್ ಸಮಾರಂಭದಲ್ಲಿ 2 ಸಾವಿರ ಅತಿಥಿಗಳಿಗೆ ಬೆಳ್ಳಿಯ ಬಿಸ್ಕತ್ತು, ಸಫಾರಿ ಸೂಟ್ ಮತ್ತು ಹಣ ನೀಡಲಾಗಿತ್ತು. ವರನ ನಾಮಕರಣ ಸಮಾರಂಭದಲ್ಲಿ 2.5 ಕೋಟಿ ರೂಪಾಯಿಗಳ ಉಡುಗೊರೆಗಳನ್ನು ಹಂಚಲಾಗಿತ್ತು.

ಹರಿಯಾಣದ ಜೌನಾಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ 15 ಸಾವಿರ ಅತಿಥಿಗಳಿಗೆ 100ಕ್ಕೂ ಹೆಚ್ಚು ಬಗೆಯ ಭಕ್ಷ್ಯಗಳನ್ನು ಉಣಬಡಿಸಲಾಯಿತು. ಅಷ್ಟೇ ಅಲ್ಲದೆ, ಎಲ್ಲರೂ ವೀಕ್ಷಿಸಲು ಬೃಹತ್ ಎಲ್‌ಸಿಡಿ ಪರದೆಗಳನ್ನು ಹಾಕಲಾಗಿತ್ತು. ಬಾಲಿವುಡ್ ನಟಿ ನೇಹಾ ಧೂಪಿಯಾ ಸೇರಿದಂತೆ ಅನೇಕ ತಾರೆಯರು ಕಾರ್ಯಕ್ರಮ ನೀಡಿದರು. ನಂತರ ನಡೆದ ಆರತಕ್ಷತೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಭಾಗವಹಿಸಿದ್ದರು. ಈ ಮದುವೆಗೆ ಸುಮಾರು 22 ರಿಂದ 55 ಮಿಲಿಯನ್ ಡಾಲರ್‌ಗಳಷ್ಟು ಖರ್ಚು ಮಾಡಲಾಗಿತ್ತು ಎಂದು ವರದಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read