ಭಾರತದ ಅತ್ಯಂತ ಶ್ರೀಮಂತ ಐಎಎಸ್ ಅಧಿಕಾರಿ ಯಾರು ಎಂದು ತಿಳಿದಿದೆಯೇ ? ಅವರೇ ಅಮಿತ್ ಕಟಾರಿಯಾ. ವಿಶೇಷ ಅಂದರೆ, ಅವರು ಮೊದಲು ಕೇವಲ ಒಂದು ರೂಪಾಯಿ ಸಂಬಳ ಪಡೆಯುತ್ತಿದ್ದರು!
ಹರಿಯಾಣದ ಗುರುಗ್ರಾಮದ ಶ್ರೀಮಂತ ಉದ್ಯಮಿ ಕುಟುಂಬಕ್ಕೆ ಸೇರಿದ ಅಮಿತ್ ಕಟಾರಿಯಾ ಅವರಿಗೆ ದೊಡ್ಡ ವ್ಯಾಪಾರ ಸಾಮ್ರಾಜ್ಯವಿತ್ತು. ಆದರೆ, ಅವರು ದೇಶ ಸೇವೆ ಮಾಡುವ ಆಸಕ್ತಿಯಿಂದ ಐಎಎಸ್ ಅಧಿಕಾರಿಯಾದರು. ಆರಂಭದಲ್ಲಿ ಕೇವಲ ಒಂದು ರೂಪಾಯಿ ಸಂಬಳ ಪಡೆಯುತ್ತಿದ್ದ ಕಟಾರಿಯಾ, ಇಂದು ಕೋಟಿಗಳ ಒಡೆಯ.
ಐಐಟಿ ದೆಹಲಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಕಟಾರಿಯಾ, 2003 ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದರು. ಅವರ ಪತ್ನಿ ಅಸ್ಮಿತಾ ಹಂಡಾ ವೃತ್ತಿಯಲ್ಲಿ ಪೈಲಟ್.
ಒಂದು ಕಾಲದಲ್ಲಿ ಪ್ರಧಾನಮಂತ್ರಿಗಳ ಜೊತೆಗಿನ ಭೇಟಿಯಲ್ಲಿ ಕಪ್ಪು ಕನ್ನಡಕ ಧರಿಸಿ ವಿವಾದಕ್ಕೆ ಸಿಲುಕಿದ್ದ ಅಮಿತ್ ಕಟಾರಿಯಾ ಅವರ ನಿವ್ವಳ ಮೌಲ್ಯ ಸುಮಾರು 8.90 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ದೇಶ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡ ಈ ಅಧಿಕಾರಿ ನಿಜಕ್ಕೂ ವಿಶಿಷ್ಟ ವ್ಯಕ್ತಿ.