ಬೆಂಗಳೂರು : ಕಾರ್ಮಿಕರ ದಿನದಂದು ಗುತ್ತಿಗೆ ಆಧಾರಿತ ಪೌರ ಕಾರ್ಮಿಕರನ್ನು ಹಾಗೂ ತ್ಯಾಜ್ಯ ಸಂಗ್ರಹಣಾ ವಾಹನಗಳ ಚಾಲಕರನ್ನು ಖಾಯಂಗೊಳಿಸುವ ನಿರ್ಧಾರಕ್ಕೆ ನಾವು ಬಂದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಸವಾದಿ ಶರಣರ ಕಾಯಕವೇ ಕೈಲಾಸವೆಂಬ ಮಾತಿಗೆ ಬದ್ಧರಾಗಿ ಬಿಸಿಲು – ಮಳೆ, ಹಗಲು – ರಾತ್ರಿಯೆನ್ನದೆ ಸಮಾಜವನ್ನು ಸ್ವಚ್ಚವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಕಲ್ಯಾಣ ನಮ್ಮ ಕರ್ತವ್ಯ.
2017ರಲ್ಲಿಯೂ 10,000 ಪೌರಕಾರ್ಮಿಕರ ಖಾಯಂಮಾತಿ, ವೇತನವನ್ನು ₹7,000 ದಿಂದ ₹17,000 ಸಾವಿರಕ್ಕೆ ಹೆಚ್ಚಳ ಮಾಡಿದ್ದು ನಾವೇ, ಎಲ್ಲ ಕಾಲಕ್ಕೂ ಶ್ರಮಿಕ ಜನರ ನಿಜವಾದ ಹಿತಚಿಂತಕರು ನಾವೆ ಎಂದು ಅವರು ಹೇಳಿದರು.
ಕಾರ್ಮಿಕರ ದಿನದಂದು ಗುತ್ತಿಗೆ ಆಧಾರಿತ ಪೌರ ಕಾರ್ಮಿಕರನ್ನು ಹಾಗೂ ತ್ಯಾಜ್ಯ ಸಂಗ್ರಹಣಾ ವಾಹನಗಳ ಚಾಲಕರನ್ನು ಖಾಯಂಗೊಳಿಸುವ ನಿರ್ಧಾರಕ್ಕೆ ನಾವು ಬಂದಿದ್ದೇವೆ.
— DIPR Karnataka (@KarnatakaVarthe) April 7, 2025
ಬಸವಾದಿ ಶರಣರ ಕಾಯಕವೇ ಕೈಲಾಸವೆಂಬ ಮಾತಿಗೆ ಬದ್ಧರಾಗಿ ಬಿಸಿಲು – ಮಳೆ, ಹಗಲು – ರಾತ್ರಿಯೆನ್ನದೆ ಸಮಾಜವನ್ನು ಸ್ವಚ್ಚವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಕಲ್ಯಾಣ ನಮ್ಮ… pic.twitter.com/7ErcworXwR