BIG UPDATE : ಶಿವಮೊಗ್ಗದಲ್ಲಿ ಮೀನು ಹಿಡಿಯಲು ಹೋಗಿದ್ದ ಐವರು ಮಕ್ಕಳು ಸುರಕ್ಷಿತವಾಗಿ ಪತ್ತೆ, ನಿಟ್ಟುಸಿರು ಬಿಟ್ಟ ಪೋಷಕರು.!

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುಮಾರಿ ನಾರಾಯಣಪುರ ಗ್ರಾಮದ ಬಳಿ ನಾಪತ್ತೆಯಾಗಿದ್ದ ಐವರು ಮಕ್ಕಳು ಪತ್ತೆಯಾಗಿದ್ದಾರೆ.

ಮೀನು ಹಿಡಿಯಲು ಹೋಗುತ್ತೇವೆ ಎಂದು ಹೋಗಿದ್ದ ಮಕ್ಕಳು ನಂತರ ರಾತ್ರಿ ಕುಮಾರಿ ನಾರಾಯಣಪುರ ಗ್ರಾಮದ ಬಳಿ ದೇಗುಲವೊಂದರಲ್ಲಿ ಮಲಗಿದ್ದರು . ನಂತರ ಬೆಳಗ್ಗೆ ಮಕ್ಕಳು ಸ್ಥಳೀಯರ ಕಣ್ಣಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಎಲ್ಲಾ 5 ಮಕ್ಕಳು ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಕಾಲುವೆಯಲ್ಲಿ ಮೀನು ಹಿಡಿಯಲು ಹೋಗುತ್ತೇವೆ ಎಂದು ಹೋಗಿದ್ದ 5 ಮಕ್ಕಳು ನಾಪತ್ತೆಯಾಗಿದ್ದರು. ಈ ಹಿನ್ನೆಲೆ ಆತಂಕ ಸೃಷ್ಟಿಯಾಗಿತ್ತು, ನಾಪತ್ತೆಯಾದ ಮಕ್ಕಳಿಗಾಗಿ ಅಗ್ನಿಶಾಮಕದಳ ಸಿಬ್ಬಂದಿ, ಪೊಲೀಸರು, ಸ್ಥಳೀಯರು ಹುಡುಕಾಟ ನಡೆಸಿದ್ದರು. ಆದರೆ ದೇಗುಲದ ಬಳಿಕ ಮಕ್ಕಳು ಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.ಧನುಷ್(14), ಚರಣ್(10), ಲೋಹಿತ್(12), ಲಕ್ಷ್ಮೀಶ್(12) ಸೇರಿ 5 ಮಕ್ಕಳು ನಾಪತ್ತೆಯಾಗಿದ್ದರು. ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read