ಬೆಂಗಳೂರು: ವಿಧಾನಸೌಧದಲ್ಲಿ ನೂತನವಾಗಿ ಅಭಿವೃದ್ಧಿಪಡಿಸಲಾಗಿರುವ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾರ್ವಜನಿಕರ ವೀಕ್ಷಣೆಗೆ ಅರ್ಪಿಸಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಳವಡಿಕೆ ಮಾಡಲಾದ ಬಣ್ಣಬಣ್ಣದ ವಿದ್ಯುತ್ ದೀಪಗಳು ಐತಿಹಾಸಿಕ ವಿಧಾನಸೌಧದ ಮೆರುಗನ್ನು ಹೆಚ್ಚಿಸುವ ಜೊತೆಗೆ ನೋಡಗರ ಕಣ್ಮನ ಸೆಳೆಯಲಿದೆ. ವಿಧಾನಸೌಧವೀಗ ನಿಸ್ಸಂಶಯವಾಗಿ ಮತ್ತಷ್ಟು ಸುಂದರ, ಮನಮೋಹಕವಾಗಿದೆ ಎಂದು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ವರ್ಣರಂಜಿತ ಶಾಶ್ವತ ದೀಪಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದು, ಶನಿವಾರ, ಭಾನುವಾರ ವಿಶೇಷ ಸಂದರ್ಭದಲ್ಲಿ ದೀಪಾಲಂಕಾರ ಮಾಡಲಾಗುವುದು. ವಿಧಾನಸೌಧದಲ್ಲಿ ಸುಮಾರು 1063 ವಿದ್ಯುತ್ ದೀಪಗಳನ್ನು ಅಳವಡಿಕೆ ಮಾಡಲಾಗಿದೆ. ಸಮಾರಂಭದಲ್ಲಿ ಸ್ಪೀಕರ್ ಯು.ಟಿ. ಖಾದರ್, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಹೆಚ್.ಕೆ. ಪಾಟೀಲ್, ಕೆ.ಜೆ. ಜಾರ್ಜ್, ಸಿಎಸ್ ಶಾಲಿನಿ ಉಪಸ್ಥಿತರಿದ್ದರು.
ಸ್ಪೀಕರ್ ಯು.ಟಿ. ಖಾದರ್ ಇದಕ್ಕಾಗಿ ಮುತುವರ್ಜಿ ವಹಿಸಿದ್ದಾರೆ. ಅವರಿಗೆ ಸರ್ಕಾರದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ. ಬೆಳಗಾವಿಯ ಸುವರ್ಣಸೌಧದಲ್ಲಿಯೂ ದೀಪಾಲಂಕಾರ ಮಾಡಲಾಗಿದೆ. ದೇಶದ ಸಮಸ್ಯೆ ಚರ್ಚೆ ಮಾಡಬೇಕಾದ ಸ್ಥಳಗಳು ಇವು. ಸಮಾಜದಲ್ಲಿ ಶಾಂತಿ ಹಾಗೂ ನೆಮ್ಮದಿ ಇರಬೇಕು ಅಂದರೆ ಸಮ ಸಮಾಜ ನಿರ್ಮಾಣ ಆಗಬೇಕು. ಜನ ನಮ್ಮನ್ನು ಆರಿಸಿ ಕಳಿಸಿದ್ದಾರೆ ಅವರ ಕೆಲಸ ಮಾಡಿಕೊಡಬೇಕು ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ನೂತನವಾಗಿ ಅಭಿವೃದ್ಧಿಪಡಿಸಲಾಗಿರುವ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಸಾರ್ವಜನಿಕರ ವೀಕ್ಷಣೆಗೆ ಅರ್ಪಿಸಿ, ಶುಭ ಹಾರೈಸಿದೆ.
— Siddaramaiah (@siddaramaiah) April 6, 2025
ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಳವಡಿಕೆ ಮಾಡಲಾದ ಬಣ್ಣಬಣ್ಣದ ವಿದ್ಯುತ್ ದೀಪಗಳು ಐತಿಹಾಸಿಕ ವಿಧಾನಸೌಧದ ಮೆರುಗನ್ನು ಹೆಚ್ಚಿಸುವ ಜೊತೆಗೆ ನೋಡಗರ ಕಣ್ಮನ ಸೆಳೆಯಲಿದೆ. ವಿಧಾನಸೌಧವೀಗ… pic.twitter.com/ibpbrm9Wqs