ಮೈಸೂರು: ಲಾಂಗ್ ಹಿಡಿದು ರೀಲ್ಸ್ ಮಾಡಿ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಇಬ್ಬರೂ ಕಾನೂನು ಸಂಕಷ್ಟ ಎದುರಿಸಿದ ಪ್ರಕರಣ ಮಾಸುವ ಮುನ್ನವೇ ಮೈಸೂರಿನಲ್ಲಿ ಯುವಕನೊಬ್ಬ ಸರ್ಕಾರಿ ವಾಹನದಲ್ಲಿ ಗನ್ ಹಿಡಿದು ಪೋಸ್ ಕೊಟ್ಟು, ವಿಡಿಯೋ ಮಾಡಿರುವ ಘಟನೆ ನಡೆದಿದೆ.
ಚಲಿಸುತ್ತಿದ್ದ ಐಷಾರಾಮಿ ಕಾರು, ಜೀಪುಗಳ ಮೇಲೆ ನಿಂತು ರೀಲ್ಸ್ ವಿಡಿಯೋ ಮಾಡಿರುವ ಯುವಕ, ಸರ್ಕಾರಿ ವಾಹನದಲ್ಲಿ ಕುಳಿತು ಗನ್ ಹಿಡಿದು ಪೋಸ್ ಕೊಟ್ಟಿದ್ದಾನೆ. ಯುವಕನ ರೀಲ್ಸ್ ವಿಡಿಯೋ ವೈರಲ್ ಆಗಿದೆ. ಈತ ಮೈಸೂರಿನ ಕೆ.ಟಿ.ಬಡಾವಣೆಯ ಯುವಕನಾಗಿದ್ದು, ಜ್ಯುವೆಲ್ಲರಿ ಶಾಪ್ ಮಾಲಿಕರ ಮಗ ಎಂದು ತಿಳಿದುಬಂದಿದೆ.
ವೈರಲ್ ಆಗಿರುವ ರೀಲ್ಸ್ ವರ್ಷದ ಹಿಂದೆ ಮಾಡಿದ್ದು ಎಂದು ಹೇಳಲಾಗುತ್ತಿದೆ. ಗನ್ ಹಿಡಿದು ಸರ್ಕಾರಿ ವಾಹನದಲ್ಲಿ ಕುಳಿತುಕೊಳ್ಳುತ್ತಿರುವ ಯುವಕನ ವಿಡಿಯೋ ವೈರಲ್ ಆಗಿದೆ. ಯುವಕನಿಗೆ ರೀಲ್ಸ್ ಗಾಗಿ ಸರ್ಕಾರಿ ವಾಹನ ಕೊಟ್ಟಿದ್ದು ಯಾರು? ಎಂಬ ಪ್ರಶ್ನೆ ಮೂಡಿದೆ.
ಯುವಕನ ರೀಲ್ಸ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಸರಸ್ವತಿಪುರಂ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.