ಬೆಳಗಾವಿ: ಯುವಕನೊಬ್ಬ ದುಬಾರಿ ಮೊಬೈಲ್ ಖರೀದಿಸಿದ್ದಕ್ಕೆ ತಂದೆ ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ನ್ಯೂ ವೈಭವ್ ನಗರದಲ್ಲಿ ನಡೆದಿದೆ.
24 ವರ್ಷದ ಮುಸ್ತಫೀಸ್ ಅಬ್ದುಲ್ ರಶೀದ್ ಶೇಖ್ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಇಎಂಐ ಮೂಲಕ ಯುವಕ 70 ಸಾವಿರ ರೂಪಾಯಿ ಐಫೋನ್ ಖರೀದಿಸಿದ್ದ. ಈ ವಿಚಾರ ಗೊತ್ತಾಗಿ ತಂದೆ ಗರಂ ಆಗಿದ್ದಾರೆ. ಅಲ್ಲದೇ ಮಗನಿಗೆ ಒಂದು ಮೊಬೈಲ್ ಗಾಅಗಿ ಇಷ್ಟೊಂದು ಹಣ ಖರ್ಚು ಮಾಡಿದ್ದೀಯಾ. ಕಡಿಮೆ ಬೆಲೆಯ ಮೊಬೈಲ್ ತೆಗೆದುಕೊಳ್ಳಬಹುದಿತ್ತು. ಯಾಕೆ ಇಷ್ಟೊಂದು ಹಣ ಖರ್ಚು ಮಾಡಿದೆ? ಎಂದು ಬುದ್ಧಿವಾದ ಹೇಳಿದ್ದಾರೆ.
ಅಪ್ಪ ಬೈದು ಬುದ್ಧಿಹೇಳಿದ್ದಕ್ಕೆ ಮನನೊಂದ ಯುವಕ ತನ್ನ ರೂಪಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಿಗ್ಗೆ ಎಷ್ಟು ಹೊತ್ತಾದರೂ ಮಗ ರೂಮಿನಿಂದ ಹೊರಬಾರದಿದ್ದಾಗ ಪೋಷಕರು ಗಾಬರಿಯಾಗಿದ್ದಾರೆ. ಕರೆದರೂ ರೂಮಿನಿಂದ ಮಗನ ಸುಳಿವಿಲ್ಲ. ಬಾಗಿಲು ತೆರೆದು ನೋಡಿದಾಗ ಮಗ ನೇಣಿಗೆ ಕೊರಳೊಡ್ದಿರುವುದು ಗೊತ್ತಾಗಿದೆ.
ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.