SHOCKING : ‘ವಿವಾಹ ವಾರ್ಷಿಕೋತ್ಸವ’ದಂದು ಹೃದಯಾಘಾತದಿಂದ ಕುಸಿದು ಬಿದ್ದು ಪತ್ನಿ ಕಣ್ಣೆದುರೇ ಪತಿ ಸಾವು : ಆಘಾತಕಾರಿ ವಿಡಿಯೋ ವೈರಲ್ |WATCH VIDEO

ಅದೊಂದು ಸುಂದರ ಕ್ಷಣ… ಮದುವೆಯಾದ 25 ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯಲ್ಲಿದ್ದ ದಂಪತಿಗಳು ಭರ್ಜರಿ ನೃತ್ಯ ಮಾಡುತ್ತಿದ್ದರು. ಆದರೆ ವಿಧಿ ಆಟವೇ ಬೇರೆ ಆಗಿತ್ತು. ಕ್ಷಣಮಾತ್ರದಲ್ಲಿ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು.ವಿವಾಹ ವಾರ್ಷಿಕೋತ್ಸವದಂದೇ ಹೃದಯಾಘಾತದಿಂದ ಕುಸಿದು ಬಿದ್ದು ಪತ್ನಿ ಎದುರೇ ಪತಿ ಸಾವನ್ನಪ್ಪಿದ ಘಟನೆಯ ವಿಡಿಯೋ ಸದ್ಯ ವೈರಲ್ ಆಗಿದೆ.

ಉತ್ತರ ಪ್ರದೇಶದ ಬರೇಲಿಯ ಕಲ್ಯಾಣ ಮಂಟಪದಲ್ಲಿ ಶೂ ವ್ಯಾಪಾರಿ 50 ವರ್ಷದ ವಾಸಿಮ್ ಸರ್ವತ್ ತನ್ನ ಪತ್ನಿ ಫರಾಹ್ ಅವರೊಂದಿಗೆ ತಮ್ಮ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಾಸಿಮ್ ಸರ್ವತ್ ನೃತ್ಯ ಮಾಡುವಾಗಲೇ ಕುಸಿದು ಬೀಳುತ್ತಾನೆ, ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಕುಟುಂಬ ಸದಸ್ಯರು ವಾಸಿಮ್ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. “ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು” ಎಂದು ಸಂಬಂಧಿಕರು ತಿಳಿಸಿದ್ದಾರೆ. ಅವರು ಶಾಲಾ ಶಿಕ್ಷಕಿಯಾಗಿರುವ ಫರಾಹ್ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ರಕ್ತ ಪರಿಚಲನೆ ಅಥವಾ ಹೃದಯ ಲಯದಲ್ಲಿ ಸಮಸ್ಯೆ ಇದ್ದಾಗ ಹಠಾತ್ ಹೃದಯ ಸ್ತಂಭನ ಸಂಭವಿಸಬಹುದು. ಉಸಿರಾಟದ ತೊಂದರೆ ಅಥವಾ ಅನಿಯಮಿತ ಹೃದಯ ಬಡಿತದಂತಹ ರೋಗಲಕ್ಷಣಗಳು ಕಾಣಿಸಿಕೊಂಡರೆ ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read