HomeKarnatakaBIG NEWS : ರಾಜ್ಯದ ಪ್ರೌಢಶಾಲಾ ಶಿಕ್ಷಕರುಗಳಿಗೆ ಬಡ್ತಿ : 'ಶಿಕ್ಷಣ ಇಲಾಖೆ'ಯಿಂದ ಮಹತ್ವದ ಆದೇಶ.!

BIG NEWS : ರಾಜ್ಯದ ಪ್ರೌಢಶಾಲಾ ಶಿಕ್ಷಕರುಗಳಿಗೆ ಬಡ್ತಿ : ‘ಶಿಕ್ಷಣ ಇಲಾಖೆ’ಯಿಂದ ಮಹತ್ವದ ಆದೇಶ.!

ಬೆಂಗಳೂರು : ಸ್ನಾತಕೋತ್ತರ ಪದವಿ ಪಡೆದಿರುವ ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಸ್ನಾತಕೋತ್ತರ ಪದವಿ ಪಡೆದಿರುವ ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಸಹಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ನೀಡಲು ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಸಹಶಿಕ್ಷಕರ ಒಂದೇ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸುವ ಕುರಿತು ದಿನಾಂಕ : 29/03/2025 ರಂದು ನಿರ್ದೇಶಕರು (ಪ್ರೌಢಶಿಕ್ಷಣ] ರವರ ಅಧ್ಯಕ್ಷತೆಯಲ್ಲಿ ವಿಡಿಯೋ ಕಾನ್ಸರೆನ್ಸ್ ಸಭೆ ನಡೆಸಲಾಗಿದೆ.

1. ವಿಭಾಗೀಯ ಸಹನಿರ್ದೇಶಕರ ಕಛೇರಿಯಿಂದ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಸಹಶಿಕ್ಷಕರ ವಿವರಗಳನ್ನು ನಿಗದಿತ ನಮೂನೆಯಲ್ಲಿ ಸ್ವೀಕೃತವಾಗಿರುತ್ತದೆ. ಈ ದತ್ತಾಂಶವನ್ನು ಕ್ರೋಡೀಕರಿಸಿ ಒಂದೇ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಲು ಕ್ರಮವಹಿಸಲಾಗುತ್ತದೆ.
2. ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ನಿಖರತೆಗೆ ಈಗಾಗಲೇ ಸಲ್ಲಿಸಿರುವ ಮಾಹಿತಿಯೊಂದಿಗೆ ಈ ಕೆಳಕಂಡ ವಿವರಗಳ ಅಗತ್ಯವಿರುತ್ತದೆ.
1) IF PROMOTED PROMOTION ORDER DATE
2) IF PROMOTED SL NO IN PROMOTION ORDER
3) IF PROMOTED % IN PRIMARY CADRE SELECTION (ENTER ALL DIGITS NOT TO BE ROUNDED OFF)
4) IF DR SELECTION ORDER DATE
5) IF DR SL.NO IN SELECTION LIST
6) IF DR % IN SELECTION ORDER (ENTER ALL DIGITS NOT TO BE ROUNDED OFF)
ಸದರಿ ವಿವರಗಳನ್ನು ಈಗಾಗಲೇ ಸಿದ್ಧಪಡಿಸಿರುವ ನಮೂನೆಯಲ್ಲಿ Column No 11,12,13, 15,16,17 ರಲ್ಲಿ ಈ ಹಿಂದೆ ಸಲ್ಲಿಸಿರುವ ವಿವರಗಳೊಂದಿಗೆ ಭರ್ತಿ ಮಾಡಲು ತಿಳಿಸಿದೆ.
3. nari ನಮೂನೆಯಲ್ಲಿ ಸಲ್ಲಿಸಿರುವ ಮಾಹಿತಿಯನ್ನು ಪುನರ್ ಪರಿಶೀಲಿಸಿ ತಪ್ಪುಗಳಿದ್ದಲ್ಲಿ ಸರಿಪಡಿಸಿ ಸಲ್ಲಿಸುವುದು.
4. ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ತುರ್ತಾಗಿ ಸರ್ಕಾರಕ್ಕೆ ಸಲ್ಲಿಸಬೇಕಾಗಿದ್ದು, ದಿನಾಂಕ : 05.04.2025 ರ ಒಳಗೆ ವಿಭಾಗೀಯ ಸಹನಿರ್ದೇಶಕರು ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ. ಇದಕ್ಕೆ ಎಲ್ಲಾ ವಿಭಾಗೀಯ ಸಹನಿರ್ದೇಶಕರು ಸಹಮತಿಸಿದರು.
ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು(ಆ) ರವರು ಈ ಕುರಿತು ಕೂಡಲೇ ಕ್ರಮವಹಿಸಿ ನಿಖರವಾದ ಮಾಹಿತಿ ಸಿದ್ಧಪಡಿಸಿ ವಿಭಾಗೀಯ ಸಹನಿರ್ದೇಶಕರಿಗೆ ಸಕಾಲದಲ್ಲಿ ಸಲ್ಲಿಸಲು ತಿಳಿಸುವುದರೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular