BREAKING NEWS: ಭಾರತೀಯ ಸೇನೆಗೆ ಗೇಮ್ ಚೇಂಜರ್ ‘ಪ್ರಚಂಡ’ ಬಲ: ಇದುವರೆಗಿನ ಅತಿದೊಡ್ಡ ರಕ್ಷಣಾ ಒಪ್ಪಂದಕ್ಕೆ ಅನುಮೋದನೆ

ನವದೆಹಲಿ: ಐತಿಹಾಸಿಕ ನಡೆಯಲ್ಲಿ ಭಾರತವು ತನ್ನ ಅತಿದೊಡ್ಡ ರಕ್ಷಣಾ ಖರೀದಿ ಒಪ್ಪಂದಕ್ಕೆ ಅನುಮೋದನೆ ನೀಡಿದೆ,

ಭಾರತೀಯ ಸೇನೆ ಮತ್ತು ವಾಯುಪಡೆಗಾಗಿ 156 ಮೇಡ್-ಇನ್-ಇಂಡಿಯಾ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ಗಳು(LCH) ‘ಪ್ರಚಂಡ್’ ಖರೀದಿಗೆ ಅನುಮೋದನೆ ನೀಡಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ಜೊತೆಗಿನ 45,000 ಕೋಟಿ ರೂ.ಗಳ ಒಪ್ಪಂದವನ್ನು ಶುಕ್ರವಾರ ನಡೆದ ಸಭೆಯಲ್ಲಿ ಭದ್ರತಾ ಕುರಿತ ಸಂಪುಟ ಸಮಿತಿ(CCS) ಅನುಮೋದಿಸಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ಗೆ ಇದುವರೆಗಿನ ಅತಿದೊಡ್ಡ ಆದೇಶ ಇದಾಗಿದ್ದು, ಚಾಪರ್‌ಗಳನ್ನು ಕರ್ನಾಟಕದ ಬೆಂಗಳೂರು ಮತ್ತು ತುಮಕೂರಿನಲ್ಲಿರುವ HAL ಸ್ಥಾವರಗಳಲ್ಲಿ ನಿರ್ಮಿಸಲಾಗುವುದು ಎಂದು hELlAgide.

ದೇಶೀಯ ಯುದ್ಧ ಹೆಲಿಕಾಪ್ಟರ್‌ಗಳಿಗೆ ಅತಿದೊಡ್ಡ ಆರ್ಡರ್

ಈ ಒಪ್ಪಂದವು ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸ್ವಾವಲಂಬನೆಗೆ ಪ್ರಮುಖ ಉತ್ತೇಜನವನ್ನು ನೀಡಿದೆ, HAL ಜೂನ್ 2024 ರಲ್ಲಿ LCH ಗಾಗಿ ಆರಂಭಿಕ ಆದೇಶಗಳನ್ನು ಪಡೆದಿತ್ತು. 156 ಹೆಲಿಕಾಪ್ಟರ್‌ಗಳಲ್ಲಿ 90 ಭಾರತೀಯ ಸೇನೆಯೊಂದಿಗೆ ನಿಯೋಜಿಸಲಾಗುವುದು, 60 ಭಾರತೀಯ ವಾಯುಪಡೆಗೆ (IAF) ಸೇರ್ಪಡೆಗೊಳ್ಳಲಿವೆ.

ಅತ್ಯಾಧುನಿಕ LCH ‘ಪ್ರಚಂಡ್’ ನ ವೈಶಿಷ್ಟ್ಯಗಳು

5,000 ರಿಂದ 16,400 ಅಡಿಗಳ ನಡುವಿನ ಎತ್ತರದಲ್ಲಿ ಇಳಿಯುವ ಮತ್ತು ಟೇಕ್ ಆಫ್ ಮಾಡುವ ಸಾಮರ್ಥ್ಯವಿರುವ ಏಕೈಕ ದಾಳಿ ಹೆಲಿಕಾಪ್ಟರ್‌ಗಳು ಇವಾಗಿದ್ದು, ಎತ್ತರದ ಯುದ್ಧಕ್ಕೆ ಸೂಕ್ತವಾಗಿವೆ.

ವಾಯು-ನೆಲ ಮತ್ತು ವಾಯು-ವಾಯು ಕ್ಷಿಪಣಿಗಳನ್ನು ಹಾರಿಸಲು ಸಜ್ಜುಗೊಳಿಸಲಾಗಿದೆ. ನೆಟ್‌ವರ್ಕ್-ಕೇಂದ್ರಿತ ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸುವ, ಆಧುನಿಕ ಯುದ್ಧ ಸನ್ನಿವೇಶಗಳಲ್ಲಿ ಸಮನ್ವಯವನ್ನು ಸುಧಾರಿಸುವ ಸಂಯೋಜಿತ ಡೇಟಾ ಚಿಪ್‌ಗಳು ಒಳಗೊಂಡಿವೆ.

IAF ಗೆ ಅಕ್ಟೋಬರ್ 2022 ರಲ್ಲಿ ಸೇರ್ಪಡೆಗೊಂಡ ಪ್ರಚಂದ್ ಹೆಲಿಕಾಪ್ಟರ್‌ಗಳನ್ನು ಭಾರತದ ವೈಮಾನಿಕ ಯುದ್ಧ ಸಾಮರ್ಥ್ಯಗಳಿಗೆ ಗೇಮ್-ಚೇಂಜರ್ ಎಂದು ಪರಿಗಣಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read