KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಸಾರ್ವಜನಿಕರೇ ಗಮನಿಸಿ : ಬಿಸಿಲಿನ ತಾಪಮಾನದಿಂದ ರಕ್ಷಣೆ ಪಡೆಯಲು ಈ ಆರೋಗ್ಯ ಸಲಹೆಗಳನ್ನು ಪಾಲಿಸಿ

Published March 18, 2025 at 3:32 pm
Share
SHARE

ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಾರ್ವಜನಿಕ ಆರೋಗ್ಯ ಸಲಹೆಯನ್ನು ಅನುಸರಿಸುವ ಮೂಲಕ ತಮ್ಮ ಆರೋಗ್ಯದ ಕಾಳಜಿ ವಹಿಸಬೇಕೆಂದು ಶಿವಮೊಗ್ಗದ ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ತಿಳಿಸಿದ್ದಾರೆ.

ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಅಲ್ಲದೆ ಮೇ ಯಿಂದ ಮಾರ್ಚ್ ವರೆಗೆ ವಾತಾರವಣದಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ. ಇದರಿಂದಾಗಿ ವಾತಾವರಣದಲ್ಲಿ ಅನೇಕ ರೀತಿಯ ಬದಲಾವಣೆ ಉಂಟಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಜಿಲ್ಲೆಯ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

ಬಿಸಿಲು ಹೆಚ್ಚಾಗಿದೆ. ದಿನೇ ದಿನೇ ಸಾರ್ವಜನಿಕರು ಕೆಲಸದ ಒತ್ತಡದ ಜೊತೆಗೆ ಬಿಸಿಲಿನ ಬೇಗೆಯನ್ನು ಸಹಿಸಿಕೊಳ್ಳದ ಸ್ಥಿತಿಗೆ ತಲುಪಿದ್ದಾರೆ. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಮನುಷ್ಯನ ದೇಹದ ಉಷ್ಣತೆಯು 36.4 ಡಿಗ್ರಿ ಸೆ ನಿಂದ 37.2 ಡಿಗ್ರಿ ಸೆ( 97.5 ಡಿಗ್ರಿ ಸೆ ಎಫ್ ನಿಂದ 98.9 ಡಿಗ್ರಿ ಸೆ ಎಫ್) ಆಗಿರುತ್ತದೆ. ಹಾಗಾಗಿ ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳು ಹೆಚ್ಚಿನ ಉಷ್ಣತೆಯಿಂದ ಕೂಡಿರುತ್ತದೆ. ಈ ಉಷ್ಣತೆಯ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

ನೀರು ಹೆಚ್ಚು ಸೇವಿಸಿ:

ಬಾಯಾರಿಕೆ ನಿರ್ಜಲೀಕರಣದ ಲಕ್ಷಣವಾಗಿದ್ದು. ಪ್ರಯಾಣ ಮಾಡುವ ಸಮಯದಲ್ಲಿ ಹಾಗೂ ಬಾಯಾರಿಕೆ ಇಲ್ಲದಿದ್ದರೂ ಸಹ ಹೆಚ್ಚೆಚ್ಚು ನೀರನ್ನು ಆಗಾಗ್ಗೆ ಕುಡಿಯಬೇಕು. ಮೌಖಿಕ ಪುನರ್ಜಲೀಕರಣ ದ್ರಾವಣ ಹಾಗೂ ಮನೆಯಲ್ಲಿಯೇ ಸಿದ್ದಪಡಿಸಿದ ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ/ಲಸ್ಸಿ, ಹಣ್ಣಿನ ಜ್ಯೂಸ್ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸಬೇಕು. ಹಾಗೂ ಈ ಋತುಮಾನದಲ್ಲಿ ಲಭ್ಯವಿರುವ ಹೆಚ್ಚಿನ ನೀರಿನಾಂಶ ಹೊಂದಿರುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಬೇಕು. ಇದರಿಂದ ದೇಹವು ಒಣಗದೆ ಚರ್ಮವು ಸದಾ ತ್ವಚ್ಛೆಯಿಂದ ಕೂಡಿರುತ್ತದೆ.

ಇದಲ್ಲದೆ ನಾವು ಧರಿಸುವ ಬಟ್ಟೆಗಳು ಕೂಡ ದೇಹದ ಸುರಕ್ಷತೆಗೆ ಬಹುಮುಖ್ಯವಾಗಿದೆ. ಇಂತಹ ತಾಪಮಾನದಲ್ಲಿ ತಿಳಿ ಬಣ್ಣದ, ಅಳಕವಾದ ಹತ್ತಿಯ ಬಟ್ಟೆಯನ್ನು ಧರಿಸಬೇಕು. ಹೊರ ಹೋಗುವ ಸಂದರ್ಭದಲ್ಲಿ ಛತ್ರಿ, ಟೋಪಿ, ಟವೆಲ್ ಅಥವಾ ಇನ್ನಾವುದೇ ಸಂಪ್ರಾದಯಿಕ ಪದ್ಧತಿಯನ್ನು ಅನುಸರಿಸಿ ಬಿಸಿಲಿನಿಂದ ಪಡೆಯಬೇಕು. ಈ ಸಂದರ್ಭದಲ್ಲಿ ಚಪ್ಪಲಿ/ ಶೂಸ್ಗಳನ್ನು ಧರಿಸಬೇಕು.

ಬಿಸಿಲಿನಲ್ಲಿ ಅಂದರೆ 12 ರಿಂದ 3 ಗಂಟೆಗೆ ಹೊರ ಹೋಗುವುದನ್ನು ತಪ್ಪಿಸಬೇಕು. ಚಪ್ಪಲಿ ಧರಸಿ ಹೊರ ಹೋಗಬೇಕು. ಮಧ್ಯಾಹ್ನ ಅಡುಗೆ ಸಿದ್ದಪಡಿಸುವ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲನ್ನು ತೆರದಿಡಿ, ಮಧ್ಯಾಹ್ನ ಟೀ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಿ. ಇದರಿಂದ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ ಅಥವಾ ಹೊಟ್ಟೆ ನೋವು ಉಂಟು ಮಾಡುತ್ತದೆ.

ಉಷ್ಣತೆಯ ಪರಿಣಾಮದಿಂದಾಗುವ ಆರೋಗ್ಯ ಸಮಸ್ಯೆಗಳು : ಮನುಷ್ಯನ ದೇಹವು ನೀರಿನಿಂದ ಕೂಡಿದ್ದು, ದಿನವಿಡಿ ಸಕ್ರಿಯವಾಗಿರಲು, ದೇಹದ ತ್ವಚ್ಛೆಗಾಗಿ ನೀರು ಅತ್ಯವಶ್ಯ. ಹಾಗಾಗಿ ಈ ಬಿಸಿಯ ಧಗೆಯಲ್ಲಿ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ಪೂರೈಸಬೇಕು. ಇಲ್ಲಿದಿದ್ದರೆ ಅತಿಯಾದ ಉಷ್ಣತೆಯಿಂದಾಗಿ ಸಾಧಾರಣದಿಂದ ತ್ರೀವ ಜ್ವರ, ಗಂಧೆಗಳು, ಊತಗಳು, ಸ್ನಾಯು ಸೆಳೆತಗಳು, ಪ್ರಜ್ಞೆ ತಪ್ಪುವುದು, ಉಷ್ಣತೆಯಿಂದ ಸುಸ್ತಾಗುವುದು ಹಾಗೂ ಉಷ್ಣತೆಯಿಂದ ಪಾಶ್ವವಾಯು ಉಂಟಾಗುತ್ತದೆ. ಹಾಗೂ ಉಷ್ಣತೆ ತೀವ್ರತೆಗೆ ಹೃದ್ರೋಗ ಸಮಸ್ಯೆಗಳು, ಉಸಿರಾಟದ ಸಮಸ್ಯೆಗಳು ಹಾಗೂ ಕಿಡ್ನಿ ಸಮಸ್ಯೆಗಳು ಅಧಿಕವಾಗುತ್ತದೆ. ಜೊತೆಗೆ ಅತಿಯಾದ ಶಾಖದಿಂದ ತಲೆ ಸುತ್ತುವುದು, ಅತಿಯಾದ ಬಾಯಾರಿಕೆ, ವಾಕರಿಕೆ ಅಥವಾ ವಾಂತಿಯಾಗುವುದು, ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ, ತಲೆನೋವು, ಏರು ಗತಿಯ ಉಸಿರಾಟ ಹಾಗೂ ಹೃದಯದ ಬಡಿತದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

ನವಜಾತ ಶಿಶುಗಳು, ಗರ್ಭಿಣಿಯರು, ವೃದ್ದರು ಎಚ್ಚರ ವಹಿಸಿ

ಬಿಸಿಗಾಳಿಯ ಒತ್ತಡ ಹಾಗೂ ಬಿಸಿ ಗಾಳಿಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳಿಂದ ಎಲ್ಲರಿಗೂ ಅಪಾಯವಿದ್ದು, ನವಜಾತ ಶಿಶುಗಳು ಹಾಗೂ ಚಿಕ್ಕಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು, ಆರೋಗ್ಯ ಸಮಸ್ಯೆಗಳಿರುವವರು ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು ಹೆಚ್ಚು ಜಾಗೂರಕತೆಯಿಂದರಬೇಕು. ಹಾಗೂ ಪ್ರತ್ಯೇಕವಾಗಿ/ ಒಂಟಿಯಾಗಿ ವಾಸಿಸುವ ವೃದ್ಧರು ಅಥವಾ ರೋಗಿಗಳ ಉಸ್ತುವಾರಿ ಹಾಗೂ ಅವರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆಯನ್ನು ದೈನಂದಿನವಾಗಿ ಕೈಗೊಳ್ಳಬೇಕು. ಮನೆಯ ಒಳಾಂಗಣವನ್ನು ತಣ್ಣಗಿರಿಸಲು ಪರದೆಗಳು/ ಷಟರ್ಗಳನ್ನು ಬಳಸಬೇಕು ಹಾಗೂ ರಾತ್ರಿ ಸಮಯದಲ್ಲಿ ಕಿಟಿಕಿಗಳನ್ನು ತೆರೆದಿಡಬೇಕು. ಹಗಲು ಹೊತ್ತಿನಲ್ಲಿ ಮನೆಯ ಕೆಳಗಿನ ಮಹಡಿಗಳಲ್ಲಿರುವುದು ಉತ್ತಮ, ಶರೀರವನ್ನು ತಣ್ಣಗಿಡಲು ಫ್ಯಾನ್ ಅಥವಾ ತೇವವಾದ ಬಟ್ಟೆಯನ್ನು ಬಳಸಬಹುದು.

ಉಷ್ಣತೆಯಿಂದ ಆರೋಗ್ಯ ಸಮಸ್ಯೆ ತಡೆಗಟ್ಟುವುದು

ಅತಿಯಾದ ಉಷ್ಣತೆಯಿಂದ ಆರೋಗ್ಯ ಸಮಸ್ಯೆ ಉಂಟಾದರೆ ತಕ್ಷಣವೇ ತಂಪಾದ ಸ್ಥಳಕ್ಕೆ ತೆರಳಿ ಮತ್ತು ದ್ರವಾಹಾರವನ್ನು ಸೇವಿಸಿ, ತಕ್ಷಣವೇ ಸಹಾಯ ಹಾಗೂ ವೈದ್ಯಕೀಯ ನೇರವನ್ನು ಪಡೆಯಿರಿ. ದೇಹದ ಉಷ್ಣತೆಯನ್ನು ಪರೀಕ್ಷಿಸಿ. ಮಾಂಸಖAಡಗಳಲ್ಲಿ ಸೆಳೆತ ಕಂಡಬAದಲ್ಲಿ ತಕ್ಷಣವೇ ತಂಪಾದ ಸ್ಥಳದಲ್ಲಿ ವಿಶ್ರಾಂತಿ ಪಡೆಯಿರಿ ಹಾಗೂ ಹೆಚ್ಚು ಎಲೆಕ್ಟೊçಲೈಟ್ ಗಳನ್ನು ಹೊಂದಿದ ಮೌಖಿಕ ಪುನರ್ಜಲೀಕರಣ ದ್ರಾವಣಗಳನ್ನು ಸೇವಿಸಬೇಕು. ಅತಿಯಾದ ಉಷ್ಣತೆಯಿಂದ ಉಂಟಾಗುವ ಸ್ನಾಯು ಸೆಳೆತವು 1 ಗಂಟೆಯ ಅವಧಿಯಲ್ಲಿ ಶಮನಗೊಳ್ಳದಿದ್ದರೆ ವೈದ್ಯಕೀಯ ನೆರವನ್ನು ಪಡೆಯಬೇಕು.

ಹೊರಾಂಗಣ ಚಟುವಟಿಕೆಗಳನ್ನು ಆದಷ್ಟು ದಿನದ ತಣ್ಣನೆಯ ಸಮಯದಲ್ಲಿ ಅಂದರೆ ಬೆಳಗಿನ ಹೊತ್ತು ಅಥವಾ ಸಂಜೆಗೆ ಸೀಮಿತವಿರುವಂತೆ ಬದಲಾಯಿಸಿಕೊಳ್ಳಬೇಕು. ಹೊರಾಂಗಣ ಪ್ರದೇಶಗಳಲ್ಲಿ ಆಯೋಜಿಸಲಾಗುವ ಚಟುವಟಿಕೆಗಳು ಪೂರ್ವಾಹ್ನ 11 ಗಂಟೆಯ ಒಳಗೆ ಮುಕ್ತಾಯಗೊಳಿಸುವುದು ಉತ್ತಮ. ಪೂರ್ವಾಹ್ನ 11 ರಿಂದ ಸಂಜೆ 4 ಗಂಟೆ ಅವಧಿಯಲ್ಲಿ ಹೊರಾಂಗಣ ಸಭೆಗಳು/ಚಟುವಟಿಕೆಗಳು ನಡೆಯುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಬಿಸಲಿನಿಂದ ರಕ್ಷಣೆ ನೀಡಲು ಅಗತ್ಯ ಶಾಮಿಯಾನ ವ್ಯವಸ್ಥೆ ಮಾಡುವುದು. ಉತ್ತಮ ಗಾಳಿ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು. ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು.

ಸದಾ ಎಚ್ಚರದಿಂದಿರಿ 

ರೇಡಿಯೋ, ದೂರರ್ಶನ ಹಾಗೂ ದಿನಪತ್ರಿಕೆಗಳ ಮೂಲಕ ಸ್ಥಳೀಯ ಹವಾಮಾನದ ಮಾಹಿತಿಯನ್ನು ಪಡೆದು ಅದರಂತೆ ಚಟುವಟಿಕೆಗಳನ್ನು ಯೋಜಿಸುವುದು ಉತ್ತಮ. ಈ ಕುರಿತು ಕಾಲಕಾಲಕ್ಕೆ ಮಾಹಿತಿಯನ್ನು ಕರ್ನಾಟಕ ಸ್ಟೇಟ್ ನ್ಯಾಚುರಲ್ ಡಿಸ್ಸಾಸ್ಟರ್ ಮಾನಿಟರಿಂಗ್ ಸೆಂಟರ್ನ ಜಾಲತಾಣ https://www.ksdmc.org/default.aspx ದಲ್ಲಿ ಮಾಹಿತಿಯನ್ನು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ

 

You Might Also Like

SHOCKING : ತೆರೆದ ಚರಂಡಿಗೆ ಬಿದ್ದ ‘ಜೊಮ್ಯಾಟೊ’ ಡೆಲಿವರಿ ಬಾಯ್, ಪರಿಹಾರ ನೀಡುವಂತೆ ಕಂಪನಿಗೆ ಆಗ್ರಹ |WATCH VIDEO

ಡ್ರಗ್ಸ್ ಪಾರ್ಸೆಲ್ ಹೆಸರಲ್ಲಿ ಬೆದರಿಸಿ 3 ಕೋಟಿ ರೂ. ವಂಚನೆ

BREAKING : ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ‘ಸ್ಪೋಟಕ’ ಪತ್ತೆ ಕೇಸ್ : ಮತ್ತಿಬ್ಬರು ಆರೋಪಿಗಳು ಅರೆಸ್ಟ್.!

BIG NEWS : ವಾಹನ ಸವಾರರಿಗೆ ಗುಡ್ ನ್ಯೂಸ್ :  ಆಗಸ್ಟ್ 15 ರಿಂದ ಫಾಸ್ಟ್’ಟ್ಯಾಗ್ ವಾರ್ಷಿಕ ಪಾಸ್ ಲಭ್ಯ .!

SHOCKING : ಕಸದ ವಾಹನ ಡಿಕ್ಕಿಯಾಗಿ ಸರಣಿ ಅಪಘಾತ, ಓರ್ವ ಸಾವು .! ಭಯಾನಕ ವೀಡಿಯೋ ವೈರಲ್ |WATCH VIDEO

TAGGED:attention-public-follow-these-health-tips-to-protect-yourself-from-the-scorching-heat
Share This Article
Facebook Copy Link Print

Latest News

SHOCKING : ತೆರೆದ ಚರಂಡಿಗೆ ಬಿದ್ದ ‘ಜೊಮ್ಯಾಟೊ’ ಡೆಲಿವರಿ ಬಾಯ್, ಪರಿಹಾರ ನೀಡುವಂತೆ ಕಂಪನಿಗೆ ಆಗ್ರಹ |WATCH VIDEO
ಡ್ರಗ್ಸ್ ಪಾರ್ಸೆಲ್ ಹೆಸರಲ್ಲಿ ಬೆದರಿಸಿ 3 ಕೋಟಿ ರೂ. ವಂಚನೆ
BREAKING : ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ‘ಸ್ಪೋಟಕ’ ಪತ್ತೆ ಕೇಸ್ : ಮತ್ತಿಬ್ಬರು ಆರೋಪಿಗಳು ಅರೆಸ್ಟ್.!
BIG NEWS : ವಾಹನ ಸವಾರರಿಗೆ ಗುಡ್ ನ್ಯೂಸ್ :  ಆಗಸ್ಟ್ 15 ರಿಂದ ಫಾಸ್ಟ್’ಟ್ಯಾಗ್ ವಾರ್ಷಿಕ ಪಾಸ್ ಲಭ್ಯ .!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
BREAKING : ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಆಗುವ ಹುಡುಗನ ಫೋಟೋ ವೈರಲ್.!
ಅಂಟುವಾಳ ಕಾಯಿಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ…?

Automotive

ಟೆಸ್ಲಾದಿಂದ ಮಹತ್ವದ ಘೋಷಣೆ: ಹಳೆ ಬುಕಿಂಗ್ ರದ್ದು, ಹೊಸ ಅಧ್ಯಾಯಕ್ಕೆ ಮುನ್ನುಡಿ !
ʼಮೆಟ್ರೋʼ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ : ಬಹುನಿರೀಕ್ಷಿತ ʼಯೆಲ್ಲೋ ಲೈನ್ʼ ಜೂನ್‌ನಿಂದ ಕಾರ್ಯಾರಂಭ ಸಾಧ್ಯತೆ
ತಡರಾತ್ರಿ ಪ್ರಯಾಣದಲ್ಲಿ ಚಾಲಕನಿಂದ ಅನಿರೀಕ್ಷಿತ ಸುರಕ್ಷತಾ ನೆರವು ; ʼದೇವರು ಆ ಊಬರ್ ವ್ಯಕ್ತಿಗೆ ಒಳ್ಳೆಯದು ಮಾಡಲಿʼ ಎಂದು ಮಹಿಳೆ ಹಾರೈಕೆ !

Entertainment

BIG NEWS: ಕಮಲ್ ಹಾಸನ್ ಕ್ಷಮೆ ಕೇಳದಿದ್ದರೆ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಲ್ಲ: ಸಾ.ರಾ.ಗೋವಿಂದು
ತಾಯಿ ಸಮಾಧಿ ಪಕ್ಕದಲ್ಲೇ ಇಂದು ಹಿರಿಯ ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ
SHOCKING : ಸಿನಿಮಾ ಶೂಟಿಂಗ್ ವೇಳೆ ಸ್ಟಂಟ್ ಮಾಸ್ಟರ್ ‘ಮೋಹನ್ ರಾಜ್’ ಸಾವು : ಭಯಾನಕ ವೀಡಿಯೋ ವೈರಲ್ |WATCH VIDEO

Sports

ಈಜುಕೊಳದಲ್ಲೇ ಮುಳುಗಿ ಮೃತಪಟ್ಟ ರಾಷ್ಟ್ರೀಯ ಈಜುಪಟು
ಇಲ್ಲಿದೆ 2 ತಿಂಗಳಲ್ಲಿ 17 ಕೆಜಿ ತೂಕ ಇಳಿಸಿಕೊಂಡಿದ್ದ ಕ್ರಿಕೆಟಿಗನ ಪಾನೀಯದ ರಹಸ್ಯ !
BREAKING: ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಏಕದಿನ ಕ್ರಿಕೆಟ್ ಗೆ ಮರಳಲು ಅಭ್ಯಾಸ ಆರಂಭ

Special

Optical-illusion : ಈ ಬೀದಿಬದಿಯ ಮನೆಯಲ್ಲಿ ಅಡಗಿರುವ ಬೆಕ್ಕನ್ನು ಪತ್ತೆಹಚ್ಚಬಲ್ಲಿರಾ ?
ʼಆರೋಗ್ಯʼ ವೃದ್ಧಿಗೆ ಸೇವಿಸಿ ಪ್ರತಿನಿತ್ಯ ಒಂದು ಚಮಚ ಜೇನುತುಪ್ಪ
ಕೋಚಿಂಗ್ ಕ್ಲಾಸಿಗೆ ಹೋಗದೆ ಮನೆಯಲ್ಲೇ ಹೀಗೆ ಕಲೀರಿ ಇಂಗ್ಲೀಷ್

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?