ಹಬ್ಬದ ಸೀಜನ್ ಇರಲಿ ಇಲ್ಲದಿರಲಿ ಸಿಹಿಗೆ ಬೇಡಿಕೆ ಹೆಚ್ಚು. ಅದ್ರಲ್ಲೂ ಚಾಕೋಲೇಟ್ ಎಲ್ಲರ ಅಚ್ಚುಮೆಚ್ಚು. ಸಾಮಾನ್ಯವಾಗಿ ಎಲ್ಲರೂ ಚಾಕೋಲೇಟ್ ಇಷ್ಟಪಡ್ತಾರೆ. ಎಲ್ಲ ಕಾಲದಲ್ಲೂ ಬೇಡಿಕೆ ಹೊಂದಿರುವ ಈ ಚಾಕೋಲೇಟ್ ಬ್ಯುಸಿನೆಸ್ ಕೈ ತುಂಬ ಲಾಭ ತಂದುಕೊಡೋದ್ರಲ್ಲಿ ಎರಡು ಮಾತಿಲ್ಲ.
ಚಾಕೋಲೇಟ್ ವ್ಯಾಪಾರಿ ಮಹಿಳೆಯೊಬ್ಬರು ಸುಮಾರು 5-8 ಸಾವಿರ ಬಜೆಟ್ ನಲ್ಲಿ ಚಾಕೋಲೇಟ್ ತಯಾರಿಕೆ ಶುರುಮಾಡಿದ್ದರಂತೆ. ಇದಕ್ಕೆ ಮೈಕ್ರೋವೇವ್ ಬೇಕು. ಮನೆಯಲ್ಲಿ ಮೈಕ್ರೋವೇವ್ ಇಲ್ಲದ ಮಹಿಳೆಯರಿಗೆ 15 ಸಾವಿರ ಖರ್ಚಾಗುತ್ತದೆ ಎನ್ನುತ್ತಾರೆ ಅವರು.
ಬೇರೆ ಬೇರೆ ಪ್ಲೇವರ್ ನ ಹಾಗೂ ಆಕರ್ಷಕ ಡಿಸೈನ್ ನ ಚಾಕೋಲೇಟ್ ಗಳು ಜನರಿಗೆ ಇಷ್ಟವಾಗುತ್ತವೆ. ಹಾಗಾಗಿ ಹೊಸ ಪ್ರಯೋಗಕ್ಕೆ ಕೈ ಹಾಕಬೇಕಾಗುತ್ತದೆ. ಆರಂಭದಲ್ಲಿ ಲಾಭ ನಿರೀಕ್ಷಿಸೋದು ತಪ್ಪು. ನಿಮ್ಮ ಚಾಕೋಲೇಟ್ ಟೇಸ್ಟ್ ಗ್ರಾಹಕರಿಗೆ ಇಷ್ಟವಾದ್ರೆ ಮೂರ್ನಾಲ್ಕು ತಿಂಗಳಲ್ಲಿ 30-35 ಸಾವಿರ ಲಾಭ ಪಡೆಯಬಹುದು. ವರ್ಷಕ್ಕೆ 12 ಲಕ್ಷದವರೆಗೂ ಲಾಭ ಮಾಡಬಹುದು.
ಈಗ ಜಾಹೀರಾತಿನ ಹಾಗೂ ಮಾರಾಟದ ಬಗ್ಗೆ ಚಿಂತೆ ಬೇಡ. ರಿಟೇಲ್, ಆನ್ಲೈನ್ ಮಾರುಕಟ್ಟೆ ಜೊತೆಗೆ ಫೇಸ್ಬುಕ್, ಟ್ವೀಟರ್ ನಲ್ಲಿ ನೀವು ಜಾಹೀರಾತು ನೀಡಬಹುದು. ಇದ್ರ ಮೂಲಕವೇ ಗ್ರಾಹಕರನ್ನು ತಲುಪಬಹುದು.