ವಿಶ್ವದ ಅತಿ ಚಿಕ್ಕ ಕಡಲತೀರ ; ಫುಟ್‌ಬಾಲ್ ಮೈದಾನದ ಅರ್ಧದಷ್ಟಿದೆ ಇದರ ಗಾತ್ರ !

ಪ್ರವಾಸಿಗರ ಸ್ವರ್ಗ ಯುರೋಪ್. ಇಲ್ಲಿ ಬೇಸಿಗೆ ಬಂತೆಂದರೆ ಸಾಕು, ಪ್ರವಾಸಿಗರು ಕಡಲತೀರಗಳಿಗೆ ಲಗ್ಗೆ ಇಡುತ್ತಾರೆ. ಆದರೆ, ಜನಸಂದಣಿಯಿಂದ ದೂರವಿರುವ, ಶಾಂತವಾದ, ಸುಂದರವಾದ ಕಡಲತೀರವನ್ನು ಹುಡುಕುವುದು ಕಷ್ಟ.

ಅಂತಹ ಒಂದು ಸುಂದರ ಕಡಲತೀರ ಸ್ಪೇನ್ ನಲ್ಲಿದೆ. ಅದರ ಹೆಸರು ಪ್ಲಾಯಾ ಡಿ ಗುಲ್ಪಿಪುರಿ. ವಿಶ್ವದ ಅತೀ ಚಿಕ್ಕ ಕಡಲತೀರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕಡಲತೀರ, ಸ್ಪೇನ್ ನ ಹೊರಗಿನ ಜನರಿಗೆ ಅಷ್ಟಾಗಿ ತಿಳಿದಿಲ್ಲ.

ಕೇವಲ 40 ಮೀಟರ್ ಉದ್ದವಿರುವ ಈ ಕಡಲತೀರ, ಫುಟ್ಬಾಲ್ ಮೈದಾನದ ಅರ್ಧದಷ್ಟು ಮಾತ್ರ ಇದೆ. ಸುಣ್ಣದಕಲ್ಲಿನ ಬಂಡೆಗಳಿಂದ ಸುತ್ತುವರಿದಿರುವ ಈ ಕಡಲತೀರ, ನೋಡಲು ಸಿಂಕ್ ಹೋಲ್ ನಂತೆ ಕಾಣುತ್ತದೆ.

ಅಟ್ಲಾಂಟಿಕ್ ಸಾಗರದ ಅಲೆಗಳಿಂದ ರೂಪುಗೊಂಡಿರುವ ಈ ಕಡಲತೀರದಲ್ಲಿ, ಬಿಸ್ಕೆ ಕೊಲ್ಲಿಯಿಂದ ಸುರಂಗ ಮಾರ್ಗದ ಮೂಲಕ ನೀರು ಬರುತ್ತದೆ. ಆಳವಿಲ್ಲದ ಕಾರಣ, ಇಲ್ಲಿನ ನೀರು ಬೆಚ್ಚಗಿರುತ್ತದೆ. ಇದರಿಂದ ಇಲ್ಲಿ ಈಜಾಡುವುದು ಒಂದು ಸುಂದರ ಅನುಭವ.

ಪ್ಲಾಯಾ ಡಿ ಗುಲ್ಪಿಪುರಿಯನ್ನು ಅಸ್ಟೂರಿಯಾಸ್ ಸರ್ಕಾರವು ನೈಸರ್ಗಿಕ ಸ್ಮಾರಕ ಎಂದು ಘೋಷಿಸಿದೆ. ಟ್ರಿಪ್ ಅಡ್ವೈಸರ್ ನಲ್ಲಿ, ಈ ಕಡಲತೀರದ ಬಗ್ಗೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕಡಲತೀರಕ್ಕೆ ಹೋಗಲು ಹತ್ತಿರದ ಗ್ರಾಮದಿಂದ ನಡೆದುಕೊಂಡು ಹೋಗಬಹುದು. ಇಲ್ಲಿ ಯಾವುದೇ ಸೌಲಭ್ಯಗಳಿಲ್ಲದ ಕಾರಣ, ಪ್ರವಾಸಿಗರು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ. ಬೇಸಿಗೆಯಲ್ಲಿ ಇಲ್ಲಿ ಜನಸಂದಣಿ ಹೆಚ್ಚಿರುತ್ತದೆ.

ಪ್ಲಾಯಾ ಡಿ ಗುಲ್ಪಿಪುರಿ, ಸ್ಪೇನ್ ನ ಅಸ್ಟೂರಿಯಾಸ್ ಮತ್ತು ಕ್ಯಾಂಟಾಬ್ರಿಯಾ ಗಡಿಯ ಬಳಿ ಇದೆ. ಇಲ್ಲಿನ ಸುಂದರವಾದ ಪ್ರಕೃತಿ ಮತ್ತು ಸಂಸ್ಕೃತಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read