HomeKarnatakaBIG NEWS: ಬೆಂಗಳೂರಿನಲ್ಲಿ ಈ ಬಾರಿ ಬೇಸಿಗೆ ತಾಪಮಾನ ಏರಿಕೆ; ಶಾಕಿಂಗ್ ಮಾಹಿತಿ ನೀಡಿದ ...

BIG NEWS: ಬೆಂಗಳೂರಿನಲ್ಲಿ ಈ ಬಾರಿ ಬೇಸಿಗೆ ತಾಪಮಾನ ಏರಿಕೆ; ಶಾಕಿಂಗ್ ಮಾಹಿತಿ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಕರ್ನಾಟಕದಲ್ಲಿ ಈಗ ಚಳಿ ಮಾಯವಾಗಿ ನಿಧಾನವಾಗಿ ಬೇಸಿಗೆಯ ವಾತಾವರಣ ಶುರುವಾಗಿದೆ. ವಿಶೇಷವಾಗಿ ಈ ಬೇಸಿಗೆಯಲ್ಲಿ ಬೆಂಗಳೂರಿನ ತಾಪಮಾನದ ಬಗ್ಗೆ ಹವಾಮಾನ ಇಲಾಖೆಯ ಮಾಹಿತಿ ಒಂದನ್ನು ಹೊರಹಾಕಿದೆ.ಈ ವರ್ಷ ರಾಜ್ಯದಲ್ಲಿ ಮಳೆ ಮತ್ತು ಚಳಿಗಾಲ ತೀವ್ರವಾಗಿತ್ತು. ಅದೇ ರೀತಿ ಬೇಸಿಗೆಯೂ ಅದಕ್ಕೆ ತಕ್ಕಂತೆ ಫೆಬ್ರವರಿಯಿಂದಲೇ ಹಗಲು ಬಿಸಿಲಿನ ಝಳ ವಿಪರೀತ ಎನಿಸುವಷ್ಟು ಹೆಚ್ಚಾಗಿದೆ.

ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಪಮಾನ ದಾಖಲೆಯ ಹಂತ ತಲುಪಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯಾವಾಗಲೂ ವಾಹನ ದಟ್ಟಣೆ ಮತ್ತು ಜನರಿಂದ ತುಂಬಿ ತುಳುಕುವ ಹೊತ್ತಿನಲ್ಲಿ ಬೇಸಿಗೆಯಲ್ಲಿ ತಾಪಮಾನ 39 ಡಿಗ್ರಿಯವರೆಗೆ ತಲುಪಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಪಮಾನ 36 ರಿಂದ 39 ಡಿಗ್ರಿಯವರೆಗೆ ಇರಲಿದೆ. ಹೀಗಾಗಿ ಹಾಟೆಸ್ಟ್ ಬೆಂಗಳೂರನ್ನು ಎದುರಿಸಲು ಸಿದ್ದರಾಗುವುದು ಉತ್ತಮ.

ಮುಂದಿನ 7 ದಿನಗಳವರೆಗೆ ರಾಜ್ಯದಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ತಂಪು ಪಾನೀಯಗಳ ಬೇಡಿಕೆ ಹೆಚ್ಚುವ ಎಲ್ಲಾ ಲಕ್ಷಣಗಳು ಕಂಡುಬರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular