HomeKarnatakaJOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ಗೃಹರಕ್ಷಕರ ಸ್ವಯಂ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ

JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ಗೃಹರಕ್ಷಕರ ಸ್ವಯಂ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಧಾರವಾಡ : ಧಾರವಾಡ ಜಿಲ್ಲೆಯ ಧಾರವಾಡ, ಅಳ್ಳಾವರ, ಹುಬ್ಬಳ್ಳಿ, ಕುಂದಗೋಳ ಅಣ್ಣಿಗೇರಿ ಮತ್ತು ನವಲಗುಂದ ಘಟಕಗಳಲ್ಲಿ ಖಾಲಿ ಇರುವ ಗೃಹರಕ್ಷಕರ ಸ್ವಯಂ ಸೇವಕ ಸದಸ್ಯರ ಹುದ್ದೆಗಳ ನೊಂದಣಿಗಾಗಿ ಅರ್ಹ ಪುರುಷ, ಮಹಿಳಾ ಸ್ಥಳೀಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಅರ್ಜಿಯನ್ನು ಧಾರವಾಡ ಡಿ.ಎ.ಆರ್. ಪೊಲೀಸ್ ಹೆಡ್ ಕ್ವಾರ್ಟಸ್ಟ್ ಆವರಣದಲ್ಲಿರುವ ಗೃಹರಕ್ಷಕದಳ ಕಛೇರಿಯ ಜಿಲ್ಲಾ ಸಮಾದೇಷ್ಟರಿಂದ ಉಚಿತವಾಗಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಮಾರ್ಚ 5, 2025 ರೊಳಗಾಗಿ ಸಲ್ಲಿಸಬಹುದು. ಅರ್ಜಿಯನ್ನು ಫೆಬ್ರವರಿ 05, 2025 ರಿಂದ ವಿತರಿಸಲಾಗುವುದು.

296 ಗೃಹರಕ್ಷಕರ ಸ್ವಯಂ ಸೇವಕ ಹುದ್ದೆಗಳ ವಿವರ: ಧಾರವಾಡ ಪುರಷ-95, ಮಹಿಳಾ- 14, ಅಳ್ಳಾವರ ಪುರಷ-95, ಹುಬ್ಬಳ್ಳಿ ಪುರಷ-97, ಮಹಿಳಾ- 1, ಕುಂದಗೋಳ ಪುರಷ-24, ನವಲಗುಂದ ಪುರಷ-8, ಅಣ್ಣಿಗೇರಿ ಪುರಷ-14, ಕಲಘಟಗಿ ಪುರಷ-02, ಒಟ್ಟು ಪುರಷ-254, ಮಹಿಳಾ-15.  ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 0836-2442496 ಹಾಗೂ ಸಹಾಯಕ ಆಡಳಿತಾಧಿಕಾರಿಗಳು, ಪೊಲೀಸ್  ಅಧೀಕ್ಷಕರ ಕಛೇರಿಯ ದೂರವಾಣಿ ಸಂಖ್ಯೆ: 0836-2233205 ಅಥವಾ ಹೋಂಗಾಡ್ರ್ಸ್ ಕಛೇರಿ,  ಪೊಲೀಸ್ ಹೆಡ್ ಕ್ವಾಟ್ಸ್ರ್ಸ್ ಆವರಣ, ಸಮಾದೇಷ್ಟರು (ಕಮಾಂಡೆಂಟ್) ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular