HomeIndiaಕಟ್ಟಡ ಕಾರ್ಮಿಕನಿಗೆ 33 ಕೋಟಿ ರೂ. ತೆರಿಗೆ ಪಾವತಿಗೆ ನೋಟಿಸ್: ಆಧಾರ್, ಪಾನ್ ಕಾರ್ಡ್ ದುರ್ಬಳಕೆ...

ಕಟ್ಟಡ ಕಾರ್ಮಿಕನಿಗೆ 33 ಕೋಟಿ ರೂ. ತೆರಿಗೆ ಪಾವತಿಗೆ ನೋಟಿಸ್: ಆಧಾರ್, ಪಾನ್ ಕಾರ್ಡ್ ದುರ್ಬಳಕೆ ಶಂಕೆ

ಅಲೀಗಢ: ಮಾಸಿಕ 15 ಸಾವಿರ ರೂಪಾಯಿ ದುಡಿಯುವ ಕಟ್ಟಡ ಕಾರ್ಮಿಕರೊಬ್ಬರಿಗೆ 33.88 ಕೋಟಿ ರೂ. ತೆರಿಗೆ ಬಾಕಿ ಇದೆ ಎಂದು ಹೇಳಿ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.

34 ವರ್ಷದ ಕರಣ್ ಕುಮಾರ್ ಕಟ್ಟಡ ಕಾರ್ಮಿಕರಾಗಿದ್ದು, ತಿಂಗಳಿಗೆ 15,000 ರೂ. ದುಡಿಯುತ್ತಾರೆ. ಅವರಿಗೆ ಇಷ್ಟೊಂದು ಪ್ರಮಾಣದ ಆದಾಯ ತೆರಿಗೆ ಬಾಕಿ ಇರುವುದಾಗಿ ನೋಟಿಸ್ ನೀಡಲಾಗಿದೆ.

ಇನ್ನು ಸಾರಿಗೆ ಕಂಪನಿಯೊಂದರಲ್ಲಿ ಸಣ್ಣಪುಟ್ಟ ಕೆಲಸ ಮಾಡುವ ಮೋಹಿತ್ ಕುಮಾರ್ ತಿಂಗಳಿಗೆ 8,500 ರೂ. ದುಡಿಯುತ್ತಿದ್ದು, ಅವರಿಗೆ 3.87 ಕೋಟಿ ರೂಪಾಯಿ ತೆರಿಗೆ ಬಾಕಿ ಇದೆ ಎಂದು ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ರೀತಿ ಅನೇಕರಿಗೆ ನೋಟಿಸ್ ನೀಡಿದ್ದು, ಅವರೆಲ್ಲ ಆತಂಕಗೊಂಡಿದ್ದಾರೆ. ತಿಂಗಳಿಗೆ ಇಷ್ಟು ಕಡಿಮೆ ಸಂಬಳ ಪಡೆಯುವವರು ಆದಾಯ ತೆರಿಗೆ ಪಾವತಿಸಬೇಕಿಲ್ಲ. ಆದರೆ,ಅವರ ಆಧಾರ್ ಕಾರ್ಡ್ ಸಂಖ್ಯೆ, ಪಾನ್ ಕಾರ್ಡ್ ಸಂಖ್ಯೆಯಂತಹ ವೈಯಕ್ತಿಕ ದಾಖಲೆಗಳ ಮಾಹಿತಿ ಸೋರಿಕೆಯಿಂದ ಇಂತಹ ಪ್ರಕರಣ ನಡೆಯುತ್ತಿವೆ ಎನ್ನಲಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದೆಹಲಿಯ ಮಹಾವೀರ್ ಎಂಟರ್ಪ್ರೈಸಸ್ ಎನ್ನುವ ಕಂಪನಿ ಕಟ್ಟಡ ಕಾರ್ಮಿಕ ಕರಣ್ ಕುಮಾರ್ ಅವರ ಆಧಾರ್ ಮತ್ತು ಪಾನ್ ಸಂಖ್ಯೆ ಬಳಸಿ ಅವರ ಹೆಸರಲ್ಲಿ ಪೆಟ್ರೋಲಿಯಂ ಉತ್ಪನ್ನ ಮತ್ತು ಉಕ್ಕು ಮಾರಾಟದಲ್ಲಿ ವ್ಯವಹಾರ ನಡೆಸಿದೆ.

ಮೋಹಿತ್ ಕುಮಾರ್ ಅವರ ಆಧಾರ್ ಕಾರ್ಡ್ ಬಳಸಿಕೊಂಡು ಎಂ.ಕೆ. ಟ್ರೇಡರ್ಸ್ ಎನ್ನುವ ಕಂಪನಿ ಹಣಕಾಸಿನ ವ್ಯವಹಾರ ಮಾಡುತ್ತಿದ್ದು, ಮೋಹಿತ್ ತಾವು ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕರಿಗೆ ಈ ವಿಷಯ ತಿಳಿಸಿದ್ದು, ಅವರು ಜಿಎಸ್‌ಟಿ ವಕೀಲರೊಬ್ಬರ ಬಳಿ ಕರೆದುಕೊಂಡು ಹೋದಾಗ ಈ ಮಾಹಿತಿ ಗೊತ್ತಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular