ಬೆಳಗಾವಿ : ಏಪ್ರಿಲ್ ಮೊದಲ ವಾರದಲ್ಲಿ ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಜನವರಿ ತಿಂಗಳ ಹಣವನ್ನು ನಾವು ಈಗಾಗಲೇ ಕ್ಲಿಯರ್ ಮಾಡಿದ್ದೇವೆ. ಇನ್ನು ಫೆಬ್ರವರಿ ಕಂತಿನ ಹಣವನ್ನು ಕೂಡ ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಹಾಕಲಿದ್ದೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಮೊನ್ನೆ ಫಲಾನುಭವಿಗಳ ಖಾತೆಗೆ ಜನವರಿ ತಿಂಗಳ ಹಣ ಜಮಾ ಆಗಿದೆ. 2500 ಕೋಟಿ ರೂ ಹಣ ಕ್ಲಿಯರ್ ಆಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.