
ಹಾಸನ: ರಾಜ್ಯದಲ್ಲಿ ಸಚಿವ ಕೆ.ಎನ್.ರಾಜಣ್ಣ ಹನಿಟ್ರ್ಯಾಪ್ ಯತ್ನ ಪ್ರಕರಣ ಮತ್ತೆ ಭಾರಿ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಸಭಾಪತಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಭಾಪತಿ ಹೊರಟ್ಟಿ, ಹನಿಟ್ರ್ಯಾಪ್ ಸರಿಯಲ್ಲ. ಹನಿಟ್ರ್ಯಾಪ್ ಪ್ರಕರಣದಲ್ಲಿ ಇಬ್ಬರೂ ಒಳ್ಳೆಯವರಲ್ಲ. ಮಾಡಿದವನು, ಮಾಡಿಸಿಕೊಂಡವನು ಇಬ್ಬರೂ ಒಳ್ಳೆಯವರಲ್ಲ ಎಂದು ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎಲ್ಲರೂ ಅರಿಯಬೇಕು. ಹಿಂದಿನ ರಾಜಕಾರಣಕ್ಕೂ ಈಗಿನ ರಾಜಕಾರಣಕ್ಕೂ ಬಹಳ ಅಂತರವಿದೆ. ಜನಪ್ರತಿನಿಧಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಜನರು ಯಾಕೆ ಆಯ್ಕೆ ಮಾಡಿಕಳುಹಿಸುತ್ತಾರೆ ಎಂಬುದರ ಬಗ್ಗೆ ಅರಿವಿರಬೇಕು. ವಿಧಾನಸೌಧ ಎಂದರೆ ನಾಡಿನ ಶಕ್ತಿ ಕೇಂದ್ರ. ದೇವಸ್ಥಾನ ಇದ್ದಂತೆ. ಇಂತಹ ಪ್ರಕರಣಗಳು ಸರಿಯಲ್ಲ ಎಂದು ಹೇಳಿದರು.