
ರಾಯಚೂರು: ಯುಗಾದಿ ಹಬ್ಬದ ದಿನವೇ ಪತಿ ಮಹಾಶಯನೊಬ್ಬ ಪತ್ನಿ ಹಾಗೂ ಆಕೆಯ ಸಹೋದರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಪದ್ಮ ಹಾಗೂ ಭೂದೇವಿ ಹಲ್ಲೆಗೊಳಗಾದವರು. ತವರು ಮನೆಯಲ್ಲಿದ್ದ ಪತ್ನಿ ಪದ್ಮ ಹಾಗೂ ಆಕೆ ಸಹೋದರಿ ಭೂದೇವಿ ಮೇಲೆ ಪತಿಇ ತಿಮ್ಮಪ್ಪ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬಳಿಕ ಪರಾರಿಯಾಗಿದ್ದಾನೆ.
ತಿಮ್ಮಪ್ಪ ಹಾಗೂ ಪತ್ನಿ ಪದ್ಮಳಿಗೆ ನಾಲ್ಕು ಮಕ್ಕಳಿದ್ದಾರೆ. ಆದಾಗ್ಯೂ ತಿಮ್ಮಪ್ಪ ಮೊದಲ ಪತ್ನಿ ಇರುವಗಲೇ ಎರಡನೇ ಮದುವೆಯಾಗಿದ್ದ. ಇದರಿಂದ ನೊಂದ ಪದ್ಮ, ತವರು ಮನೆ ಸೇರಿದ್ದಳು. ಅಲ್ಲದೇ ಜೀವನಾಂಶಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಮೊದಲ ಪತ್ನಿ ಪದ್ಮಳಿಗೆತಿಳಿಸದೇ ತಿಮ್ಮಪ್ಪ ಜಮೀನು ಮಾರಾಟ ಮಾಡಿದ. ಈ ಬಗ್ಗೆಯೂ ಪದ್ಮ ತಕರಾರು ಅರ್ಜಿ ಸಲ್ಲಿಸಿದ್ದಳು. ಇದೇ ವಿಚಾರವಾಗಿ ಜಗಳವಾಡಿದ್ದ ತಿಮ್ಮಪ್ಪ, ಪತ್ನಿ ಹಾಗೂ ಆಕೆಯ ತಂಗಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ.
ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಚೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.