ತೆಲುಗು ಹಾಗೂ ತಮಿಳು ಚಿತ್ರರಂಗದ ಜನಪ್ರಿಯ ನಟಿ ವರಲಕ್ಷ್ಮಿ ಶರತ್‌ಕುಮಾರ್, ಝೀ ತಮಿಳು ಡ್ಯಾನ್ಸ್ ಶೋನಲ್ಲಿ ತಮ್ಮ ಬಾಲ್ಯದ ಕಹಿ ನೆನಪನ್ನು ಹಂಚಿಕೊಂಡಿದ್ದಾರೆ. ಸ್ಪರ್ಧಿಯೊಬ್ಬರ ಕಥೆ ಕೇಳಿ ಭಾವುಕರಾದ ವರಲಕ್ಷ್ಮಿ, ತಾನೂ ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದನ್ನು ಬಹಿರಂಗಪಡಿಸಿದ್ದಾರೆ. ಸ್ಪರ್ಧಿ ಕೆಮಿ ತಮ್ಮ ಕುಟುಂಬದವರಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಕಥೆಯನ್ನು ಹೇಳಿದಾಗ ವರಲಕ್ಷ್ಮಿ ಕಣ್ಣೀರಿಟ್ಟರು.
“ನಾನು ನಿಮ್ಮಂತೆಯೇ. ನನ್ನ ತಂದೆ ನಟ ಶರತ್‌ಕುಮಾರ್ ಮತ್ತು ತಾಯಿ ಛಾಯಾ ಕೆಲಸಕ್ಕೆ ಹೋಗುತ್ತಿದ್ದರಿಂದ ಬೇರೆಯವರ ಆರೈಕೆಯಲ್ಲಿ ಬೆಳೆದಿದ್ದೆ. ಐದಾರು ಜನ ನನ್ನನ್ನು ಬಾಲ್ಯದಲ್ಲಿ ಲೈಂಗಿಕವಾಗಿ ದೌರ್ಜನ್ಯ ಮಾಡಿದ್ದಾರೆ” ಎಂದು ವರಲಕ್ಷ್ಮಿ ಬಹಿರಂಗಪಡಿಸಿದ್ದಾರೆ. “ನಿಮ್ಮ ಕಥೆಯೇ ನನ್ನ ಕಥೆ. ನನಗೆ ಮಕ್ಕಳಿಲ್ಲ, ಆದರೆ ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಕಲಿಸಬೇಕು ಎಂದು ನಾನು ಯಾವಾಗಲೂ ಹೇಳುತ್ತೇನೆ,” ಎಂದು ವರಲಕ್ಷ್ಮಿ ಒತ್ತಿ ಹೇಳಿದರು.
ಇತ್ತೀಚೆಗೆ ವರಲಕ್ಷ್ಮಿ ನಟಿಸಿರುವ ‘ಶಿವಂಗಿ ಲಯನೆಸ್’ ಸಿನಿಮಾ ಮಾರ್ಚ್ 7 ರಂದು ಬಿಡುಗಡೆಯಾಗಿದೆ. ಅಲ್ಲದೇ, ವಿಜಯ್ ನಟನೆಯ ‘ಜನ ನಾಯಕನ್’ ಸಿನಿಮಾದಲ್ಲಿಯೂ ವರಲಕ್ಷ್ಮಿ ನಟಿಸುತ್ತಿದ್ದಾರೆ.
సత్యభామ రా..సవాల్ చేయకు..చంపేస్తది!🔥
Here’s the BREATHTAKING Trailer of MASS CRIME THRILLER #Shivangi 🤟🏻
🔗 https://t.co/C1nLhvLhTW#ShivangiTrailer #ShivangiOnMarch7th@anandhiActress @varusarath5 @Bharanidp #NareshBabuP #AHKaashif @Teju_PRO @RainbowMedia_ @firstcopymovies pic.twitter.com/upWC3G0kwz
— First Copy Movies (@firstcopymovies) March 1, 2025
View this post on Instagram