
ವಿಜಯಪುರ: ಬಿಜೆಪಿಯಿಂದ ಶಾಸಕ ಯತ್ನಾಳ್ ಉಚ್ಛಾಟನೆ ಮಾಡಿದ ಬಳಿಕ ಯತ್ನಾಳ್ ಫುಲ್ ಆಕ್ಟೀವ್ ಆಗಿದ್ದಾರೆ. ಯುಗಾದಿ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಯತ್ನಾಳ್ ಸಿದ್ದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಪತ್ನಿ ಶೈಲಜಾ ಜೊತೆ ಸಿದ್ದೇಶ್ವರ ದೇಗುಲದಲ್ಲಿ ನಡೆದ ಹೋಮ-ಹವನದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಪಕ್ಷದಿಂದ ಉಚ್ಛಾಟನೆಯಾದರೂ ತಮ್ಮ ಕ್ಷೇತ್ರದ ವಿವಿಧ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.
ಇದೇ ವೇಳೆ ಮಾತನಾಡಿದ ಶಾಸಕ ಯತ್ನಾಳ್, ನಮ್ಮ ಭವಿಷ್ಯ ಉಜ್ವಲವಾಗುವ ದಿನಗಳು ಇಂದಿನಿಂದ ಆರಂಭವಾಗಲಿದೆ. ನಾನಾಗಿಯೇ ಯಾವ ಹಿರಿಯ ನಾಯಕರನ್ನೂ ಭೇಟಿಯಾಗಲ್ಲ ಎಂದು ಹೇಳಿದರು.