
ಬೆಂಗಳೂರು: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಎಂಟು ಮಂದಿ ಸದಸ್ಯರು ಬೆಳ್ಳಿ ಪ್ರಕಾಶ್ ಅವರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದಾರೆ.
ಲಕ್ಷ್ಮಣ ಸವದಿ, ಎಂ.ಸಿ. ಸುಧಾಕರ್, ಅರೆಬೈಲು ಶಿವರಾಮ ಹೆಬ್ಬಾರ್, ಮಂಜುನಾಥಗೌಡ, ರವಿ ಸೇರಿದಂತೆ 8 ಸದಸ್ಯರು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದಾರೆ. ಅಪೆಕ್ಸ್ ಬ್ಯಾಂಕ್ ಬೋರ್ಡ್ ಮೀಟಿಂಗ್ ಬಳಿಕ ಪತ್ರವನ್ನು ಸಲ್ಲಿಸಲಾಗಿತ್ತು.
ವ್ಯವಸ್ಥಾಪಕ ನಿರ್ದೇಶಕ ದೇವರಾಜುಗೆ ಅವಿಶ್ವಾಸ ನಿರ್ಣಯ ಪತ್ರವನ್ನು ಸದಸ್ಯರು ಸಲ್ಲಿಸಿದ್ದಾರೆ. ಮೂರು ದಿನದೊಳಗೆ ಸಹಕಾರ ಇಲಾಖೆ ರಿಜಿಸ್ಟರ್ ಗೆ ಪತ್ರ ರವಾನೆ ಮಾಡುವ ಸಾಧ್ಯತೆ ಇದೆ. ಇನ್ನು 15 ದಿನದೊಳಗೆ ಮರು ಆಯ್ಕೆ ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ. ಬಿಜೆಪಿಯ ಬೆಳ್ಳಿ ಪ್ರಕಾಶ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಪೆಕ್ಸ್ ಬ್ಯಾಂಕ್ ಮೇಲೆ ಲಕ್ಷ್ಮಣ ಸವದಿ ಮತ್ತು ಎಂಎಲ್ಸಿ ರವಿ ಕಣ್ಣಿಟ್ಟಿದ್ದಾರೆ.