ಮುಂಬೈನ ಸ್ಟಾರ್ ನಟರ ಮನೆಗಳ ಹೊರಗಿನ ಕಸದ ಬುಟ್ಟಿಗಳನ್ನು ಪರಿಶೀಲಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ್ದಾರೆ ಸಾರ್ಥಕ್ ಸಚ್‌ದೇವ್ ಎಂಬ ಕಂಟೆಂಟ್ ಕ್ರಿಯೇಟರ್. ಅಕ್ಷಯ್ ಕುಮಾರ್ ಅವರ ಕಸದ ಬುಟ್ಟಿಯಲ್ಲಿ ಪ್ರಶಸ್ತಿ ಮತ್ತು ಅಜಯ್ ದೇವಗನ್ ಅವರ ಕಸದ ಬುಟ್ಟಿಯಲ್ಲಿ ಖಾಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಇವರ ಈ ವಿಚಿತ್ರ ಸಾಹಸಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಸಾರ್ಥಕ್ ಸಚ್‌ದೇವ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗಿನ ಕಸದ ಬುಟ್ಟಿಯಲ್ಲಿ ಅಕ್ಕಿ ಚೀಲ, ಅಜಯ್ ದೇವಗನ್ ಅವರ ಕಸದ ಬುಟ್ಟಿಯಲ್ಲಿ ಚಾಕೊಲೇಟ್ ಪ್ಯಾಕೆಟ್‌ಗಳು, ತಂಬಾಕು ಮತ್ತು ಖಾಲಿ ಮದ್ಯದ ಬಾಟಲಿಗಳು, ಅಕ್ಷಯ್ ಕುಮಾರ್ ಅವರ ಕಸದ ಬುಟ್ಟಿಯಲ್ಲಿ ತೆಂಗಿನ ಚಿಪ್ಪುಗಳು, ತ್ಯಜಿಸಿದ ಸ್ಕ್ರಿಪ್ಟ್ ಮತ್ತು ಪ್ರಶಸ್ತಿಗಳು ಪತ್ತೆಯಾಗಿವೆ.
ಇದಲ್ಲದೆ, ಸಚಿನ್ ತೆಂಡೂಲ್ಕರ್ ಮತ್ತು ಶ್ರದ್ಧಾ ಕಪೂರ್ ಅವರ ಮನೆಗಳ ಹೊರಗಿನ ಕಸದ ಬುಟ್ಟಿಯಲ್ಲಿ ನೀರಿನ ಬಾಟಲಿಗಳು, ರಟ್ಟಿನ ಪೆಟ್ಟಿಗೆಗಳು, ಇಯರ್‌ಫೋನ್‌ಗಳು ಮತ್ತು ಏರ್‌ಪಾಡ್‌ಗಳು ಪತ್ತೆಯಾಗಿವೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೆಲೆಬ್ರಿಟಿಗಳ ಕಸದ ಬುಟ್ಟಿಯನ್ನು ಪರಿಶೀಲಿಸಿದ ಸಾರ್ಥಕ್‌ನ ವಿಚಿತ್ರ ಸಾಹಸಕ್ಕೆ ನೆಟ್ಟಿಗರು ನಗೆಗಡಲಲ್ಲಿ ತೇಲುತ್ತಿದ್ದಾರೆ. ಅಕ್ಷಯ್ ಕುಮಾರ್ ತಮ್ಮ ಪ್ರಶಸ್ತಿಯನ್ನು ಕಸದ ಬುಟ್ಟಿಗೆ ಎಸೆದಿರುವುದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾರುಖ್ ಖಾನ್ ಅವರ ಮನೆಯ ಕಸದ ಬುಟ್ಟಿಯಲ್ಲಿ ಏನಿದೆ ಎಂಬುದನ್ನು ಮುಂದಿನ ವಿಡಿಯೋದಲ್ಲಿ ತೋರಿಸುವುದಾಗಿ ಸಾರ್ಥಕ್ ಭರವಸೆ ನೀಡಿದ್ದಾರೆ.
View this post on Instagram
View this post on Instagram