ವಾಣಿಜ್ಯ ಅಂಗಡಿಯೊಂದರಲ್ಲಿ ನಡೆದ ಆಘಾತಕಾರಿ ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ವೃದ್ಧನಿಗೆ ಸಾರ್ವಜನಿಕವಾಗಿ ಥಳಿಸಿ, ಸ್ಥಳದಲ್ಲೇ ನ್ಯಾಯ ಒದಗಿಸಲಾಗಿದೆ.
ವಿಡಿಯೋದಲ್ಲಿ, ಕೆಂಪು ಅಂಗಿ ಧರಿಸಿದ ಯುವತಿ ಅಂಗಡಿಯೊಳಗೆ ನಿಂತಿರುವುದು ಕಂಡುಬರುತ್ತದೆ. ಆಗ ವೃದ್ಧನೊಬ್ಬ ಅಂಗಡಿಯೊಳಗೆ ಬಂದು, ಇತರ ಮಹಿಳೆಯರನ್ನು ದಾಟಿ, ಕೆಂಪು ಟೀ ಶರ್ಡ್ ಧರಿಸಿದ ಯುವತಿಯ ಬಳಿ ಬರುತ್ತಾನೆ. ಆಕೆ ಏನನ್ನು ಅರಿಯುವ ಮುನ್ನವೇ ಆತ ತನ್ನ ಖಾಸಗಿ ಭಾಗವನ್ನು ಆಕೆಯ ಬೆನ್ನಿಗೆ ಉಜ್ಜುತ್ತಾನೆ. ಇದರಿಂದ ಆಕೆ ಕಸಿವಿಸಿಗೊಳ್ಳುತ್ತಾಳೆ. ಇದನ್ನು ಬಾಗಿಲಿನ ಬಳಿ ನಿಂತಿದ್ದ ವ್ಯಕ್ತಿಯೊಬ್ಬ ಗಮನಿಸಿ ತಕ್ಷಣವೇ ಪ್ರತಿಕ್ರಿಯಿಸುತ್ತಾನೆ. ಆತ ಆ ವೃದ್ಧನ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಹಿಡಿದು ಅಂಗಡಿಯ ಮೂಲೆಯೊಂದಕ್ಕೆ ತಳ್ಳುತ್ತಾನೆ.
ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಹರಿದಾಡುತ್ತಿರುವ ಈ ವಿಡಿಯೋ ಸಾವಿರಾರು ಲೈಕ್ಸ್ ಮತ್ತು ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ತಕ್ಷಣಕ್ಕೆ ಪ್ರತಿಕ್ರಿಯಿಸಿ ನ್ಯಾಯ ಒದಗಿಸಿದ ಆ ವ್ಯಕ್ತಿಯನ್ನು ಅನೇಕ ಬಳಕೆದಾರರು ‘ರಿಯಲ್ ಲೈಫ್ ಹೀರೋ’ ಎಂದು ಶ್ಲಾಘಿಸಿದ್ದಾರೆ.
“ಸ್ಥಳದಲ್ಲೇ ತ್ವರಿತ ನ್ಯಾಯ ಸಿಕ್ಕಿದೆ!” ಎಂದು ಬಳಕೆದಾರರೊಬ್ಬರು ವಿಡಿಯೋ ಕೆಳಗೆ ಕಾಮೆಂಟ್ ಮಾಡಿದ್ದಾರೆ. “ಇಂತಹ ಸಂದರ್ಭಗಳಲ್ಲಿ ಹೆಚ್ಚು ಜನರು ಮುಂದೆ ಬರಬೇಕು!” ಎಂದು ಮತ್ತೊಬ್ಬರು ಬರೆದಿದ್ದಾರೆ.
“ಆ ಸೆಕ್ಯುರಿಟಿ ಗಾರ್ಡ್ ಮರೆಯಾಗುವ ಜಾಗದಲ್ಲಿ ನಿಂತುಕೊಂಡಿದ್ದಾನೆ” ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
Old perverted man gets handled for his sick efforts by the Statue Ninja. pic.twitter.com/RRZTTt7wAn
— Steve Inman (@SteveInmanUIC) March 26, 2025