
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೆಚ್ಚುವರಿ ವಿಮಾನ ಸಂಪರ್ಕ ಕಲ್ಪಿಸಲು ವಿಮಾನಯಾನ ಸಂಸ್ಥೆಗಳ ಬೇಸಿಗೆ ವೇಳಾಪಟ್ಟಿಯಲ್ಲಿ ಯೋಜನೆ ರೂಪಿಸಲಾಗಿದೆ.
ಇಂಡಿಗೋ ಮತ್ತು ಬೆಂಗಳೂರಿಗೆ ಕಾರ್ಯನಿರ್ವಹಿಸುವ 9 ದೈನಂದಿನ ವಿಮಾನಗಳಲ್ಲಿ ಪ್ರಯಾಣಿಸಬಹುದಾಗಿದೆ. ಬೇಸಿಗೆ ವೇಳಾಪಟ್ಟಿಯ ಆರಂಭದಲ್ಲಿ ಇಂಡಿಗೋ 6, ಏರ್ ಇಂಡಿಯಾ ಎಕ್ಸ್ಪ್ರೆಸ್ 2 ಸೇರಿ 8 ದೈನಂದಿನ ವಿಮಾನಗಳಿಗೆ ಹೆಚ್ಚಾಗಲಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 7 ದೈನಂದಿನ ವಿಮಾನಗಳ ಬದಲಿಗೆ ಮೇ 23 ರಿಂದ ಬೆಂಗಳೂರಿಗೆ 9 ದೈನಂದಿನ ವಿಮಾನಗಳು ಹಾರಾಟ ನಡೆಸಲಿದೆ. ಇಂಡಿಗೋ ವಿಮಾನಗಳ ಸೇವೆ 6ರಿಂದ 7ಕ್ಕೆ ಏರಿಕೆಯಾಗಲಿದೆ.
ಮಂಗಳೂರು -ಮುಂಬೈ ನಡುವೆ 5 ದೈನಂದಿನ ವಿಮಾನಗಳ ಸೇವೆ ಮುಂದುವರೆಯಲಿವೆ. ಮೂರು ಇಂಡಿಗೋ ಮತ್ತು ಎರಡು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳು ಹಾರಾಟ ನಡೆಯಲಿವೆ.
ನವದೆಹಲಿಗೆ ತಲಾ ಒಂದು ದೈನಂದಿನ ವಿಮಾನ ಹಾರಾಟವನ್ನು ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಮುಂದುವರಿಸಲಿದೆ. ಹೈದರಾಬಾದ್ ನಿಂದ ವಾರಕ್ಕೆ ಮೂರು ದಿನಗಳಲ್ಲಿ ಎರಡು ದೈನಂದಿನ ಮತ್ತು ಒಂದು ಹೆಚ್ಚುವರಿ ವಿಮಾನ ಹಾರಾಟ ನಡೆಸಲಿದೆ.
ಅಂತರರಾಷ್ಟ್ರೀಯ ವಲಯದಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಕಣ್ಣೂರು ಮೂಲಕ ಒಂದು ವಿಮಾನದ ಬದಲು ಮಂಗಳೂರಿನಿಂದ ನೇರವಾಗಿ ಬಹರೇನ್ ಗೆ ತನ್ನ ಎರಡು ವಾರದ ವಿಮಾನಗಳ ನಿರ್ವಹಣೆ ಮಾಡಲಿದೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ದುಬೈಗೆ ಎರಡು ದೈನಂದಿನ ವಿಮಾನಗಳು, ಅಬುದಾಭಿಗೆ ದೈನಂದಿನ ವಿಮಾನ, ದಮಾಮ್ ಮತ್ತು ಮಸ್ಕತ್ ಗೆ ವಾರಕ್ಕೆ ನಾಲ್ಕು ವಿಮಾನಗಳು, ದೋಹಾಗೆ ಪ್ರತಿ ವಾರ ಎರಡು ವಿಮಾನಗಳು ಜಡ್ಡಾ ಮತ್ತು ಕುವೈತ್ ಗೆ ಪ್ರತಿ ವಾರ ಒಂದು ವಿಮಾನ ನಿರ್ವಹಿಸುತ್ತದೆ.