ಅಹಮದಾಬಾದ್‌ನ ನರೋರಾ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಭೀಕರ ಘಟನೆಯಲ್ಲಿ ಯುವಕನೊಬ್ಬ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದಾನೆ. ಈ ಘಟನೆಯಲ್ಲಿ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ನಡೆದ ಸಂದರ್ಭದಲ್ಲಿ ಪೊಲೀಸ್ ಪಿಸಿಆರ್ ವ್ಯಾನ್ ಸಮೀಪದಲ್ಲೇ ಇದ್ದರೂ, ಸಿಬ್ಬಂದಿ ಗಾಢ ನಿದ್ರೆಯಲ್ಲಿದ್ದ ಕಾರಣ ಯಾವುದೇ ಸಹಾಯಕ್ಕೆ ಮುಂದಾಗಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ವಿಜಯ್ ಅಲಿಯಾಸ್ ವಿಶಾಲ್ ಶ್ರೀಮಾಲಿ ಮತ್ತು ಆತನ ಸ್ನೇಹಿತ ಪ್ರಿಯೇಶ್ ಅವರ ಮೇಲೆ ಆರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ವಾಗ್ವಾದದ ಸಂದರ್ಭದಲ್ಲಿ ಜಯಸಿಂಗ್ ಸೋಲಂಕಿ ಎಂಬ ಆರೋಪಿ ವಿಜಯ್‌ನ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ವಿಜಯ್‌ನನ್ನು ರಕ್ಷಿಸಲು ಪ್ರಯತ್ನಿಸಿದ ಪ್ರಿಯೇಶ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದು, ಪ್ರಿಯೇಶ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಪೊಲೀಸ್ ಪಿಸಿಆರ್ ವ್ಯಾನ್ ಇದ್ದರೂ, ಸಿಬ್ಬಂದಿ ನಿದ್ರೆಯಲ್ಲಿದ್ದ ಕಾರಣ ಯಾವುದೇ ಸಹಾಯಕ್ಕೆ ಮುಂದಾಗಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೋಪಗೊಂಡ ಗ್ರಾಮಸ್ಥರು ಪೊಲೀಸರನ್ನು ಎಬ್ಬಿಸಿ ಪ್ರಶ್ನಿಸಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆಯ ಕುರಿತು ಅಹಮದಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದು, ಆರು ಜನರನ್ನು ಬಂಧಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
બાજુમાં મર્ડર થઈ ગયું તો પણ સાહેબોની ઊંઘ ન ઊડી
અમદાવાદના બાપુનગરમાં બે લુખ્ખાઓએ છરીથી એકને પતાવી દીધો તો પણ પોલીસને ગંધ ય ન આવી
ખાટલામાં આરામથી સૂતેલા પોલીસને કિન્નરોએ ઉધડા લીધા#Ahmedabad #Gujarat pic.twitter.com/zkBpoT82Iq
— Dhruv Sanchaniya (@DhruvSanchania) March 25, 2025