
ಕೋಲಾರ: ಕುಡಿಯಲು ಹಣ ಕೊಟ್ಟಿಲ್ಲ ಎಂದು ಬಿಯರ್ ಬಟಲ್ ನಿಂದ ಚಿಕ್ಕಮ್ಮನಿಗೆ ಇರಿದು ಕೊಲೆ ಮಾಡಲು ಯುವಕ ಯತ್ನಿಸಿದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದಾಸೇಗೌಡನೂರು ಬಳಿ ನಡೆದಿದೆ.
ಗರುಡ ಕೆಂಪನಳ್ಳಿ ಗ್ರಾಮದ ಅನಸೂಯ (35) ಹಲ್ಲೆಗೊಳಗಾದ ಮಹಿಳೆ. ಆನಂದ್ (26) ಕೊಲೆಗೆ ಯತ್ನಿಸಿದ ಯುವಕ. ಕೆಲಸಕ್ಕೆ ತೆರಳಿದ್ದ ವೇಲೆ ಕುಡಿತಕ್ಕೆ ಹಣ ನೀಡುವಂತೆ ಕೇಳಿದ್ದಾನೆ. ಹಣ ಕೊಡಲು ಚಿಕ್ಕಮ್ಮ ನಿರಾಕರಿಸಿದ್ದಾರೆ.
ಹಣ ಕೊಡದಿದ್ದಕ್ಕೆ ಕೋಪಗೊಂಡು ಬಿಯರ್ ಬಾಟಲ್ ನಿಂದ ಚುಚ್ಚಿ ಇರಿದು ಕೊಲ್ಲಲು ಯತ್ನಿಸಿದ್ದಾನೆ. ಹಲ್ಲೆಗೊಳಗಾಗಿರುವ ಮಹಿಲೆಯನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಮಸಮುದ್ರ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.