
ಹಂಪಿ: ಹಂಪಿ ಪ್ರವಾಸಕ್ಕೆಂದು ಬಂದ ಕುಟುಂಬ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.
ಕೊಟ್ಟೂರು ಮೂಲದ ದಂಪತಿ ಹಾಗೂ ಇಬ್ಬರು ಮಕ್ಕಳು ಬೈಕ್ ನಲ್ಲಿ ಹಂಪಿ ಪ್ರವಾಸಕ್ಕೆಂದು ಬಂದಿದ್ದಾರೆ. ಹೀಗೆ ಬಂದವರೇ ನಾಲ್ವರು ಕ್ರಿಮಿನಾಷಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪತಿ ಚಂದ್ರಯ್ಯ (43) ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳು ಸಾವಿನಿಂದ ಪಾರಾಗಿದ್ದಾರೆ.
ಸೌಮ್ಯ (38), ಮಗಳು ಭವಾನಿ (12) ಹಾಗೂ ಶಿವು (10) ಅಪಾಯದಿಂದ ಪಾರಾಗಿದಾರೆ. ಚದ್ರಯ್ಯ ಹಾಗೂ ಕುಟುಂಬ ಹಂಪಿಯ ಕಮಲಾಪುರ ಸಮೀಪ ಸರಸ್ವತಿ ದೇವಸ್ಥಾನದ ಬಳಿ ವಿಷ ಸೇವಿಸಿದ್ದಾರೆ. ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡು ನಾಲ್ವರು ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾರೆ. ಇದನ್ನು ಕಂಡ ಸ್ಥಳೀಯರು ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲೇ ಚಂದ್ರಯ್ಯ ಸಾವನ್ನಪ್ಪಿದ್ದರು. ಮೂವರ ಸ್ಥಿತಿ ಗಂಭೀರವಾಗಿದ್ದು, ಬಳ್ಳಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸಾಲದಿಂದ ಬೇಸತ್ತು ದುಡುಕಿನ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.