
ಪಾಕಿಸ್ತಾನದ ಇಸ್ಲಾಮಾಬಾದ್‌ನ ಎಫ್-11 ಸೆಕ್ಟರ್‌ನಲ್ಲಿ ಚೀನಾ ಜನರು ನಡೆಸುತ್ತಿದ್ದ ನಕಲಿ ಕಾಲ್ ಸೆಂಟರ್ ಮೇಲೆ ಎಫ್‌ಐಎ ದಾಳಿ ಮಾಡಿದಾಗ ಸ್ಥಳೀಯರು ಕಾಲ್ ಸೆಂಟರ್‌ನಲ್ಲಿದ್ದ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್, ಮಾನಿಟರ್, ಕೀಬೋರ್ಡ್, ಫರ್ನಿಚರ್, ಕಟ್ಲರಿ ಎಲ್ಲವನ್ನೂ ದೋಚಿಬಿಟ್ಟಿದ್ದಾರೆ.
ಎಫ್‌ಐಎ ಅಧಿಕಾರಿಗಳು ದಾಳಿ ಮಾಡಿದ ನಂತರ ಸ್ಥಳೀಯರು ಕಾಲ್ ಸೆಂಟರ್‌ಗೆ ನುಗ್ಗಿ, ಸಿಕ್ಕಿದ್ದನ್ನೆಲ್ಲಾ ಎತ್ತಿಕೊಂಡು ಹೋಗಿದ್ದಾರೆ. ಯುವಕರು, ವೃದ್ಧರು, ಮಹಿಳೆಯರು ಎಲ್ಲರೂ ಮುಗಿಬಿದ್ದು, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್, ಮಾನಿಟರ್, ಕೀಬೋರ್ಡ್, ಫರ್ನಿಚರ್, ಕಟ್ಲರಿ ಹೀಗೆ ಸಿಕ್ಕಿದ್ದನ್ನೆಲ್ಲಾ ಹೊತ್ತೊಯ್ದಿದ್ದಾರೆ. ಕೆಲವರು ಫರ್ನಿಚರ್ ಮತ್ತು ಕಟ್ಲರಿ ಸೆಟ್‌ಗಳನ್ನು ಕೂಡಾ ಎತ್ತಿಕೊಂಡು ಹೋಗಿದ್ದಾರೆ. ಇದು ಒಂದು ರೀತಿಯ ಫ್ರೀ ಲೂಟ್ ಆಫರ್ ಇದ್ದ ಹಾಗೆ ಇತ್ತು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ನಾನಾ ರೀತಿಯ ಕಮೆಂಟ್‌ಗಳನ್ನು ಮಾಡಿದ್ದಾರೆ. ಕೆಲವರು ಪಾಕಿಸ್ತಾನದಲ್ಲಿ ವ್ಯಾಪಾರ ಮಾಡೋದು ಕ್ರಿಪ್ಟೋದಲ್ಲಿ ಇನ್ವೆಸ್ಟ್ ಮಾಡೋದಕ್ಕಿಂತ ರಿಸ್ಕ್, ಇನ್ನೂ ಕೆಲವರು ಇದು ಕಾಲ್ ಸೆಂಟರ್ ಅಲ್ಲ, ಚಾರಿಟಿ ಡ್ರೈವ್ ಅನ್ಕೊಂಡ್ರೇನೋ, ಲ್ಯಾಪ್‌ಟಾಪ್ ಇಂದ ಕಟ್ಲರಿ ವರೆಗೂ ಎಲ್ಲವನ್ನೂ ಎತ್ತಿಕೊಂಡು ಹೋಗಿದ್ದಾರೆ ಅಂತ ತಮಾಷೆ ಮಾಡಿದ್ದಾರೆ. ಚೀನಾ ಇಡೀ ಪಾಕಿಸ್ತಾನವನ್ನೇ ಲೂಟಿ ಮಾಡ್ತಿದೆ, ಪಾಕಿಸ್ತಾನದ ಜನ ಚೀನಾದ ಒಂದಷ್ಟು ಕಂಪ್ಯೂಟರ್, ಪ್ರಿಂಟರ್ ಲೂಟಿ ಮಾಡಿದ್ದಾರೆ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಈ ಕಾಲ್ ಸೆಂಟರ್ ಜಗತ್ತಿನಾದ್ಯಂತ ಜನರಿಗೆ ವಂಚನೆ ಮಾಡುತ್ತಿತ್ತು. ಈ ದಾಳಿಯಲ್ಲಿ ವಿದೇಶಿಗರು ಸೇರಿದಂತೆ 24 ಜನರನ್ನು ಬಂಧಿಸಲಾಗಿದೆ. ಆದರೆ, ಕೆಲವರು ತಪ್ಪಿಸಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಈ ರೀತಿಯ ಸಾರ್ವಜನಿಕ ಲೂಟಿಗಳು ಹೊಸದಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ ಕರಾಚಿಯಲ್ಲಿ ಹೊಸದಾಗಿ ತೆರೆದ ಮಾಲ್‌ಗೆ ನೂರಾರು ಜನರು ನುಗ್ಗಿ ಬಟ್ಟೆಗಳನ್ನು ಕದ್ದೊಯ್ದು ಆಸ್ತಿಪಾಸ್ತಿಗೆ ಹಾನಿ ಮಾಡಿದ್ದರು.
Pakistanis have Looted Call Centre operated by Chinese in Islamabad; Hundreds of Laptop, electronic components along with furniture and cutlery stolen during holy month of Ramadan pic.twitter.com/z6vjwBRRsq
— Megh Updates 🚨™ (@MeghUpdates) March 17, 2025