ಬಿಸಿಲಿನ ತಾಪಕ್ಕೆ ಮೈದಾನದಲ್ಲೇ ಕುಸಿದು ಬಿದ್ದು ಕ್ರಿಕೆಟಿಗರೊಬ್ಬರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಮೂಲದ ಕ್ರಿಕೆಟಿಗ ಜುನೈದ್ ಜಾಫರ್ ಖಾನ್ ಬಿಸಿಲಿನ ತಾಪಕ್ಕೆ ಕ್ರಿಕೆಟ್ ಮೈದಾನದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಹಲವು ವರದಿಗಳ ಪ್ರಕಾರ, ಜುನೈದ್ ಶನಿವಾರ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಕುಸಿದುಬಿದ್ದಿದ್ದಾರೆ. ಬಿಸಿಲಿನ ತಾಪ 40 ಡಿಗ್ರೀ ಸೆ.ದಾಟಿತ್ತು ಎನ್ನಲಾಗಿದೆ.
ಅಡಿಲೇಡ್’ ನ ಕಾಂಕಾರ್ಡಿಯಾ ಕಾಲೇಜಿನಲ್ಲಿ ಪ್ರತಿಸ್ಪರ್ಧಿ ಪ್ರಿನ್ಸ್ ಆಲ್ಫ್ರೆಡ್ ಓಲ್ಡ್ ಕೊಲಿಜಿಯನ್ಸ್ ವಿರುದ್ಧ 40 ಓವರ್ಗಳಲ್ಲಿ ಫೀಲ್ಡಿಂಗ್ ಮಾಡಿದ್ದ ಓಲ್ಡ್ ಕಾಂಕಾರ್ಡಿಯನ್ಸ್ ಕ್ರಿಕೆಟ್ ಕ್ಲಬ್ ಆಟಗಾರ ಅಜೇಯ 16 ರನ್ ಗಳಿಸಿದ್ದರು.
ವರದಿಯ ಪ್ರಕಾರ, ಖಾನ್ ಮುಸ್ಲಿಮರ ಪವಿತ್ರ ತಿಂಗಳಾದ ರಂಜಾನ್ ಅನ್ನು ಮುಂಜಾನೆಯಿಂದ ಸೂರ್ಯಾಸ್ತದವರೆಗೆ ಆಚರಿಸುತ್ತಿದ್ದರು, ಆದರೆ ಸ್ನೇಹಿತರೊಬ್ಬರು ಅವರು ದಿನವಿಡೀ ನೀರು ಕುಡಿಯುತ್ತಿದ್ದರು ಎಂದು ಪತ್ರಿಕೆಗೆ ತಿಳಿಸಿದರು. ಮುಸ್ಲಿಮರು ಅನಾರೋಗ್ಯದಿಂದ ಬಳಲುತ್ತಿದ್ದರೆ ರಂಜಾನ್ ಸಮಯದಲ್ಲಿ ಹಗಲು ಹೊತ್ತಿನಲ್ಲಿ ನೀರು ಕುಡಿಯಬಹುದು.
ವೈದ್ಯರ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರು ಬದುಕುಳಿಯಲಿಲ್ಲ. ಅಡಿಲೇಡ್ ಟರ್ಫ್ ಕ್ರಿಕೆಟ್ ಅಸೋಸಿಯೇಷನ್ ನಿಯಮದ ಪ್ರಕಾರ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾದರೆ ಪಂದ್ಯಗಳನ್ನು ರದ್ದುಗೊಳಿಸಲಾಗುತ್ತದೆ.
Deeply saddened by the tragic passing of young Pakistani-Australian Junaid Zafar Khan while playing cricket. May Allah SWT rest him in eternal peace and give strength to his family in this difficult time. Indeed, to Allah SWT we belong, and to Him we all shall return. pic.twitter.com/84o0zxXU30
— Zahid Hafeez Chaudhri (@Zhchaudhri) March 16, 2025
A cricketing match played under extreme heat, between the Old Concordians and Prince Alfred Old Collegians, has ended in disaster.
A player, aged in his 40’s, dying on the field – close friends and former team mates left stunned by the sudden death. #9News pic.twitter.com/4VrLbdHk1K
— 9News Adelaide (@9NewsAdel) March 16, 2025