ಗುವಾಹಟಿಯಲ್ಲಿ ಹೋಳಿ ಹಬ್ಬದ ಸಂಭ್ರಮ ಜೋರಾಗಿತ್ತು. ಎಲ್ಲರೂ ಕುಣಿದು ಕುಪ್ಪಳಿಸುತ್ತಾ ಹಬ್ಬ ಆಚರಿಸುತ್ತಿದ್ದರು. ಮಾರ್ಚ್ 14 ರಂದು ಬೆಲ್ಟೋಲಾದಲ್ಲಿ ಕುಡಿದ ಅಮಲಿನಲ್ಲಿದ್ದ ಯುವತಿಯೊಬ್ಬಳು ಗಲಾಟೆ ಸೃಷ್ಟಿಸಿದ್ದಾಳೆ. ಆಕೆ ಅಂಗಡಿಯೊಂದರಲ್ಲಿ ವಸ್ತುಗಳನ್ನು ಹಾಳು ಮಾಡಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇದರಿಂದಾಗಿ ಅಲ್ಲಿದ್ದವರು ಆಕೆಯನ್ನು ತಡೆಯಲು ಪ್ರಯತ್ನಿಸಿದಾಗ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಜನಸಮೂಹ ಜಮಾಯಿಸಿದ್ದು, ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಜನರು ಆಕೆಯನ್ನು ಶಾಂತಗೊಳಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರೂ, ಆಕೆ ತನ್ನ ಪುಂಡಾಟವನ್ನು ಮುಂದುವರೆಸಿದಳು. ಇದರಿಂದ ಅಧಿಕಾರಿಗಳು ಮಧ್ಯಪ್ರವೇಶಿಸುವಂತೆ ಮಾಡಿತು. ಅಂತಿಮವಾಗಿ ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪ್ರಸ್ತುತ ತನಿಖೆ ನಡೆಯುತ್ತಿದೆ.
ಸಾರ್ವಜನಿಕವಾಗಿ ಕುಡಿದು ಗಲಾಟೆ ಮಾಡುವುದು ತಪ್ಪು. ಆದರೆ, ಹುಡುಗಿಯೊಬ್ಬಳು ಗಲಾಟೆ ಮಾಡಿದಾಗ, ಅದನ್ನು ಸಾಮಾನ್ಯವಾಗಿ ಸಣ್ಣ ಘಟನೆ ಎಂದು ಪರಿಗಣಿಸಲಾಗುತ್ತದೆ. ಅದೇ ಹುಡುಗನಾಗಿದ್ದರೆ, ದೊಡ್ಡ ವಿಷಯವಾಗುತ್ತದೆ. ಈ ಭೇದಭಾವ ಸರಿಯಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
Despite efforts by bystanders to control the situation, the drunk woman refused to cooperate, making the situation even more chaotic.pic.twitter.com/ARbHggh4yZ
— ShoneeKapoor (@ShoneeKapoor) March 17, 2025