‌BIG NEWS: 26/11 ಮುಂಬೈ ದಾಳಿ ಸೂತ್ರಧಾರ ಹಫೀಜ್ ಸಯೀದ್‌ ಸಾವು ? ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿ ವೈರಲ್

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಘಟನೆಯೊಂದು ನಡೆದಿದ್ದು, ಮುಂಬೈ ದಾಳಿಯ ಪ್ರಮುಖ ಸೂತ್ರಧಾರ ಹಫೀಜ್ ಸಯೀದ್‌‌ ಮೇಲೆ ಗುಂಡಿನ ದಾಳಿಯಾಗಿದೆ. ಜೆಲಂ ಜಿಲ್ಲೆಯಲ್ಲಿ ನಡೆದ ಈ ದಾಳಿಯಲ್ಲಿ ಹಫೀಜ್ ಸಯೀದ್‌ಗೆ ಗಂಭೀರ ಗಾಯಗಳಾಗಿವೆ ಎನ್ನಲಾಗುತ್ತಿದೆ. ಆದ್ರೆ, ಈ ಬಗ್ಗೆ ಪಾಕಿಸ್ತಾನ ಸರ್ಕಾರದಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಆದ್ರೆ, ಸೋಶಿಯಲ್ ಮೀಡಿಯಾದಲ್ಲಿ ಹಫೀಜ್ ಸಯೀದ್ ಸಾವಿನ ಬಗ್ಗೆ ಗೊಂದಲದ ಸುದ್ದಿಗಳು ಹರಿದಾಡುತ್ತಿವೆ.

ಕೆಲವು ಮೂಲಗಳ ಪ್ರಕಾರ, ಶನಿವಾರ ರಾತ್ರಿ ಜೆಲಂ ಪ್ರದೇಶದಲ್ಲಿ ಹಫೀಜ್ ಸಯೀದ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಹಫೀಜ್ ಸಯೀದ್‌ನ ಸೋದರಳಿಯ ನದೀಮ್ ಸಾವನ್ನಪ್ಪಿದ್ದಾನೆ. ಹಫೀಜ್ ಸಯೀದ್ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಬಗ್ಗೆ ಪಿಟಿಐ ನಾಯಕ ಸಮದ್ ಯಾಕೂಬ್ ಪ್ರತಿಕ್ರಿಯಿಸಿದ್ದು, ಹಫೀಜ್ ಸಯೀದ್ ಮಗ ತಲ್ಹಾ ಸಯೀದ್ ಜೊತೆ ಮಾತನಾಡಿದ್ದೇನೆ. ಹಫೀಜ್ ಸಯೀದ್ ಸುರಕ್ಷಿತವಾಗಿದ್ದಾರೆ ಎಂದು ಆತ ಹೇಳಿದ್ದಾನೆ. ಆದ್ರೆ, ಆತನ ಮಾತಿನ ಶೈಲಿಯಿಂದ ಏನೋ ಗಂಭೀರವಾಗಿದೆ ಅನಿಸುತ್ತಿದೆ ಎಂದು ಯಾಕೂಬ್ ಹೇಳಿದ್ದಾರೆ. ಈ ದಾಳಿಯ ಬಳಿಕ ಜೆಲಂನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಆಸ್ಪತ್ರೆಗಳ ಬಳಿ ತೀವ್ರ ನಿಗಾ ವಹಿಸಲಾಗಿದೆ. ಪಾಕಿಸ್ತಾನದ ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಗಳು ಹೈ ಅಲರ್ಟ್ ಆಗಿವೆ.

ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಬಗ್ಗೆಯೂ ಗೊಂದಲವಿದೆ. ಕೆಲವರು ಆತ ಝಫರ್ ಇಕ್ಬಾಲ್ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಫೈಸಲ್ ನದೀಮ್ ಅಲಿಯಾಸ್ ಅಬು ಖತಲ್ ಎಂದು ಹೇಳುತ್ತಿದ್ದಾರೆ. ಹಫೀಜ್ ಸಯೀದ್ ವಿಶ್ವಸಂಸ್ಥೆಯಿಂದ ಗುರುತಿಸಲ್ಪಟ್ಟ ಭಯೋತ್ಪಾದಕನಾಗಿದ್ದಾನೆ. ಮುಂಬೈ ದಾಳಿಯ ಪ್ರಮುಖ ಸೂತ್ರಧಾರನಾಗಿದ್ದಾನೆ. ಈತನನ್ನು ಭಾರತ ಸರ್ಕಾರ ‘ಭಾರತದ ಮೋಸ್ಟ್ ವಾಂಟೆಡ್’ ಎಂದು ಘೋಷಿಸಿದೆ. ಒಂದು ವೇಳೆ ಹಫೀಜ್ ಸಯೀದ್ ಸಾವಿನ ಸುದ್ದಿ ನಿಜವಾದರೆ, ಇದು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮಹತ್ವದ ತಿರುವು ಪಡೆಯಲಿದೆ.

 

 

 

 

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read